0

“ಆರ್ಟಿಫಿಷಿಯಲ್ ಇಂಟೆಲಿಜೆನ್ಸ್; ಭವಿಷ್ಯವನ್ನು ಬದಲಾಯಿಸುವ ತಂತ್ರಜ್ಞಾನ” -ವಿನಾಯಕ್ ಆರ್.ಡಿ.

30.12.2022:ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯಹೊಸಪೇಟೆ

ಪಿಡಿಐಟಿಯಲ್ಲಿ ನೂತನ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಉದ್ಘಾಟನೆ

 

 

 

 

 

 

ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಇದರ ಅಧ್ಯಯನ ಇಂದಿನ ತಂತ್ರಜ್ಞಾನ ಕ್ಷತ್ರದಲ್ಲಿ ಮುಂಚೂಣಿಯಲ್ಲಿ ಇದೆ. ಒಂದು ಯಂತ್ರವು ತನ್ನ ಪರಿಸರವನ್ನು ಗ್ರಹಿಸಿ ತನಗೆ ಕೊಟ್ಟಿರುವ ಗುರಿಯತ್ತ ಹೆಚ್ಚು ಯಶಸ್ಸು ಪಡೆಯಲು ಅಗತ್ಯವಿರುವ ಕ್ರಮಗಳನ್ನು ತಾನೇ ಕೈಗೊಳ್ಳುತ್ತದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರ ಭವಿಷ್ಯವನ್ನು ಅಮುಲಾಗ್ರವಾಗಿ ಬದಲಾಯಿಸುತ್ತಿರುವ ತಂತ್ರಜ್ಞಾನವಾಗಿದೆ ಎಂದು ಹುಬ್ಬಳ್ಳಿಯ ನೆಕ್ಸ್ ಜಿ ಕಂಪನಿಯ ಉಪ ಸಂಸ್ಥಾಪಕ ಶ್ರೀ ವಿನಾಯಕ್ ಆರ್.ಡಿ.ಹೇಳಿದರು.

ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗಣಕ ಯಂತ್ರ ವಿಭಾಗ ಹಾಗೂ ಎ.ಐ.ಎಂ.ಎಲ್. ವಿಭಾಗಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ನೂತನ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಲ್ಯಾಬ್ ಹಾಗೂ ನೂತನ ವಿಭಾಗದ ಉದ್ಘಾಟನೆಯನ್ನು ದಿನಾಂಕ: ೩೦/೧೨/೨೦೨೨  ಶುಕ್ರವಾರದಂದು  ಉದ್ಘಾಟಿಸಿ ಮಾತನಾಡಿದರು.

ಮನಸ್ಸಿನ ಸಾಮರ್ಥ್ಯಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕ ಸಂಯೋಜಿಸುವ ಮಾನವ ಪ್ರಯತ್ನ ಹೊಸ ಸವಾಲು ಹಾಗೂ ರೋಚಕ ಆವಿಷ್ಕಾರಗಳಿಗೆ ನಾಂದಿಯಾಗಲಿದೆ.  ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಪ್ರಯೋಗಾಲಯ ಇಂದಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರ, ಸಂಶೋಧನೆಯಲ್ಲಿ ಹೆಚ್ಚು ಪೂರಕವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಬೆಂಗಳೂರಿನ  ನೆಟಲ್ಲ ಇನ್ನೋವೇಶನ್ಸ್ ಕಂಪನಿಯ ನಿರ್ದೇಶಕರಾದ  ಡಾ. ಎನ್.ಎಸ್. ಬಿರಾದಾರ್ ಮಾತನಾಡಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು ಹಾಗೂ ನೆಟಲ್ಲ ಇನ್ನೋವೇಶನ್ಸ್ ಕಂಪನಿಯ ಅನುದಾನದಲ್ಲಿ ನೂತನ ರೂ. ೧೭ ಲಕ್ಷ ವೆಚ್ಚದಲ್ಲಿ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಹಾಗೂ ಐ.ಓ.ಟಿ ಲ್ಯಾಬ್ ನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಲಕ್ಷ್ಮೇಶ್ವರದ ಅಗಡಿ ತಾಂತ್ರಿಕ ಕಾಲೇಜಿನ ಉಪ ಪ್ರಾಂಶುಪಾಲ   ಡಾ. ಪರಶುರಾಮ್ ಬಾರ್ಕಿ ಮಾತನಾಡಿ ವೀ ವೀ. ಸಂಘವು ಕಲ್ಯಾಣ ಕರ್ನಾಟಕ ವಿಭಾಗದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿದ್ದು ಪ್ರತಿಷ್ಠಿತ ಕಂಪನಿಗಳ ಜೊತೆ ಶೈಕ್ಷಣಿಕ ಒಡಂಬಡಿಕೆಗಳನ್ನು ಮಾಡಿಕೊಂಡು ಗುಣ ಮಟ್ಟದ ಶಿಕ್ಷಣ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ವೀ.ವಿ. ಸಂಘವು ವಿಶ್ವವಿದ್ಯಾಲಯವಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯ ಪಟ್ಟರು.

ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ದೊರಕಲು ವೀರಶೈವ ವಿದ್ಯಾವರ್ಧಕ ಸಂಘ ಸ್ವತಂತ್ರ ಪೂರ್ವದಿಂದಲೂ ಗ್ರಾಮೀಣ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಶಿಕ್ಷಣ ಒದಿಗಿಸುತ್ತ ಬಂದಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಎಚ್.ಎಂ.ಗುರುಸಿದ್ದಸ್ವಾಮಿ ಹೇಳಿದರು.

ಪ್ರಾಂಶುಪಾಲರಾದ ಡಾ. ಎಸ್.ಎಂ.ಶಶಿಧರ್ ಮಾತನಾಡಿ ಜಗತ್ತಿನ ಬದಲಾವಣೆಗೆ ತಕ್ಕಂತೆ  ಪಿಡಿಐಟಿ ಕಾಲೇಜು ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ.  ಈ ದೆಸೆಯಲ್ಲಿ ವಿದ್ಯಾರ್ಥಿಗಳ ಕೌಶಲ್ಯತೆ ಹೆಚ್ಚಿಸುವಲ್ಲಿ ಇಂಥ ಲ್ಯಾಬ್ ಗಳ ಅವಶ್ಯಕತೆ ಇದೆ. ಮುಂಬರುವ ದಿನಗಳಲ್ಲಿ ಡೇಟಾ ಸೈನ್ಸ್ ಎಂಬ ಹೊಸ ವಿಭಾಗವನ್ನು ಪ್ರಾರಂಭ ಮಾಡುವ ಉದ್ದೇಶ ಇದೆ ಎಂದು ಹೇಳಿದರು.

ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಪಲ್ಲೇದ್ ದೊಡ್ಡಪ್ಪ, ಉಪ ಪ್ರಾಂಶುಪಾಲ ಡಾ. ಯು. ಎಂ. ರೋಹಿತ್, ಯೋಜನೆಯ ಮುಖ್ಯ ಸಂಚಾಲಕರಾದ ಪ್ರೊ. ಮಾಲತೇಶ್, ಎ.ಐ.ಎಂ.ಎಲ್. ವಿಭಾಗ ಮುಖ್ಯಸ್ಥೆ ಪ್ರೊ.ವಸಂತಮ್ಮ, ಡಾ. ವಿಜಯ ಕುಮಾರ್ ಮಾತನಾಡಿದರು.

ಕಾರ್ಯಕ್ರಮವನ್ನು  ಪ್ರೊ. ಇಂದಿರಾ  ನಿರೂಪಿಸಿದರು, ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪಾರ್ವತೀ ಕಡ್ಲಿ ವಂದಿಸಿದರು.  ಡಾ. ಮಂಜುಳಾ ಎಸ್.ಡಿ.  ಸ್ವಾಗತಿಸಿದರು. ಕು. ಸಹನಾ ಪ್ರಾರ್ಥಿಸಿದರು. ಕಾಲೇಜಿನ ಪ್ರಧ್ಯಾಪಕ ವೃಂದ,  ಸಿಬ್ಬಂದಿ ವರ್ಗ, ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

Filed in: Activities, Computer Science Tags: 

Get Updates

Share This Post

Related Posts

© 2023 PROUD TIMES : ಪ್ರೌಢ ವಿಜಯ. All rights reserved.