0

‘ಎಲಿವೇಟ್ ಕಲ್ಯಾಣ ಕರ್ನಾಟಕ’: ಸ್ಟಾರ್ಟ್- ಅಪ್‌ಗಳಿಗೆ ಉತ್ತೇಜಕ -ಡಾ. ಸಂಧ್ಯಾ ಅನ್ವೇಕರ್

 PDIT, 06/09/2022

ವಿದ್ಯಾರ್ಥಿಗಳು ಹಾಗೂ ಯುವಸಮೂಹವನ್ನು ಉದ್ಯಮಶೀಲತೆಯತ್ತ ಆಕರ್ಷಿಸುವ ಎಲಿವೇಟ್ ಕಲ್ಯಾಣ ಕರ್ನಾಟಕ ಯೋಜನೆಯು ಈ ಭಾಗದ ಅಭಿವೃದ್ಧಿಗೆ ಉತ್ತೇಜಕವಾಗಲಿದೆ  ಎಂದು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿಯ ಕಾರ್ಯಕ್ರಮಾಧಿಕಾರಿ  ಡಾ. ಸಂಧ್ಯಾ ಅನ್ವೇಕರ್ ಅಭಿಪ್ರಾಯಪಟ್ಟರು.
ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಕರ್ನಾಟಕ ಸರ್ಕಾರದ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಜೈವಿಕ  ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ  (ಕೆ. ಕೆ. ಆರ್ ಡಿ ಬಿ) ಯ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಉದ್ಯಮಶೀಲತೆ ಮತ್ತು ಆವಿಷ್ಕಾರ ಕುರಿತ ಒಂದು ದಿನದ  ‘ಬೂಟ್ ಕ್ಯಾಂಪ್ ಶಿಬಿರವನ್ನು ಸೆಪ್ಟೆಂಬರ್ ೬ ರಂದು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೆಂಗಳೂರು ಹೊರತು ಪಡಿಸಿ  ರಾಜ್ಯದ ಹಿಂದುಳಿದ  ಪ್ರದೇಶಗಳಿಗೂ  ಉದ್ಯಮಶೀಲತೆಯನ್ನು ವಿಸ್ತರಿಸುವಲ್ಲಿ  ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ಉದ್ಯಮಶೀಲತಾ ಪ್ರೇರಣಾ ಸರಣಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ  ಕೌಶಲ್ಯವನ್ನು ಗುರುತಿಸುವ ಹಾಗೂ ಅವರನ್ನು ಉದ್ಯಮಶೀಲತೆಯ ಬಗ್ಗೆ ಪ್ರೇರಣೆ ನೀಡಿ ಹೊಸ ಸ್ಟಾರ್ಟ್ ಅಪ್ ಆರಂಭಿಸುವಲ್ಲಿ ಉತ್ತೇಜನೆ ನೀಡುವ ಹಾಗೂ ಆರ್ಥಿಕ ಸೌಲಭ್ಯ ಪಡೆಯಬಹುದು ಎಂದು ಡಾ. ಸಂಧ್ಯಾ ಅನ್ವೇಕರ್ ಹೇಳಿದರು.
ಈ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆಯಲ್ಲಿ ನೆರವೇರಿಸಲು ಸಹಕರಿಸಿದ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ ಎನ್. ಅಶ್ವಥ್  ನಾರಾಯಣ್, ಕಲ್ಬುರ್ಗಿಯ ಸಚಿವರಾದ ಶ್ರೀ ದತ್ತಾತ್ರೇಯ ರೇವೂರ್, ಡಾ. ಇ.ವಿ. ರಮಣ ರೆಡ್ಡಿ, ಶ್ರೀ ಪ್ರಶಾಂತ್ ಪ್ರಕಾಶ್, ಶ್ರೀ ಸಂಜೀವ್ ರೆಡ್ಡಿ  ಅವರನ್ನು  ಅವರು ಅಭಿನಂದಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ  ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ  ಪಲ್ಲೇದ ದೊಡ್ಡಪ್ಪ ಮಾತನಾಡಿ ಇಂತಹ ಸರ್ಕಾರದ ಯೋಜನೆಗಳು ಬಡ ವಿದ್ಯಾರ್ಥಿಗಳಿಗೆ ಸ್ಟಾರ್ಟ್ ಅಪ್ ಆರಂಭಿಸಲು ಆರ್ಥಿಕವಾಗಿ ಪೂರಕವಾಗಲಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ. ಎಸ್. ಎಂ. ಶಶಿಧರ್ ಮಾತನಾಡಿ ಜಿಲ್ಲಾ ಇನ್ನೋವೆಟಿವ್ ಹಬ್ ನ್ನು ಪಿ.ಡಿ. ಐ. ಟಿ ಯಲ್ಲಿ ಸ್ಥಾಪಿಸಲಾಗುತ್ತಿದೆ.  ನಾವೀನ್ಯತೆ  ಹಾಗೂ ಕೌಶಲ್ಯ ಹೊಂದಿರುವ  ವಿದ್ಯಾರ್ಥಿಗಳಲ್ಲಿ  ಉದ್ಯಮಶೀಲತೆಯನ್ನು ಉತ್ತೇಜಿಸಲು ಹಾಗೂ ವಿನೂತನ  ಹತ್ತು  ಪ್ರಾಜೆಕ್ಟ್ ಗಳಿಗೆ ತಲಾ ಮೂರು ಲಕ್ಷ ಮೊತ್ತದ ಆರ್ಥಿಕ ಅನುದಾನವನ್ನು ಮುಂದಿನ  ಮೂರು ವರ್ಷಗಳಲ್ಲಿ ಕೊಡಲಾಗುವುದು. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕೆಡಿಇಎಂನ ಸಂಪನ್ಮೂಲ  ವ್ಯಕ್ತಿಗಳಾದ ಗೌರವ್ ಕೆ ಪಂಜಾಬಿಯವರು ತಾಂತ್ರಿಕತೆ, ಆವಿಷ್ಕಾರ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸ್ಟಾರ್ಟ್ ಅಪ್ ಪ್ರೋಗ್ರಾಮ್ ಗಳ ಬಗ್ಗೆ ಮಾಹಿತಿ ನೀಡಿದರು.  ಸ್ಟಾರ್ಟ್ ಅಪ್ ಕರ್ನಾಟಕ ಕಾರ್ಯನಿರ್ವಾಹಕ ನಿರ್ದೇಶಕರಾದ  ಅವಿನಾಶ್ ಬಿ ಎನ್, ಸಂಪನ್ಮೂಲ  ವ್ಯಕ್ತಿಗಳಾದ ಸುಧಾಕರ್ ಸ್ಯಾಮ್ಯುಯೆಲ್ ಹಾಗೂ  ಡಾ. ಬಾಲಮುರುಗನ್, ಶಿಬಿರದಲ್ಲಿ ಉಪನ್ಯಾಸ ನೀಡಿದರು.
ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶಿಬಿರದ ಕಿಟ್ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಚಾಲಕರಾದ  ಪ್ರೊ. ಎಸ್ ಪ್ರಕಾಶ್ ಸ್ವಾಗತಿಸಿದರು. ಪ್ರೊ. ಸುಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಕು. ರಶ್ಮಿ  ಪ್ರಾರ್ಥನಾ ಗೀತೆಯನ್ನು ಹಾಡಿದರು.ಈ ಶಿಬಿರದಲ್ಲಿ ಜಿಲ್ಲೆಯ ೧೫೦ಕ್ಕೂ ಹೆಚ್ಚು  ತಾಂತ್ರಿಕ ವಿದ್ಯಾರ್ಥಿಗಳು ಪಾಲ್ಗೊಂಡರು.

ವರ್ಚುವಲ್ ಮೂಲಕ ಸಚಿವರು ಹಾಗೂ ಅಧಿಕಾರಿಗಳು  ತಮ್ಮ ಅಭಿಪ್ರಾಯವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು

KITS ಆಯೋಜಿಸಿರುವ ಬೂಟ್ ಸರಣಿ ಕ್ಯಾಂಪ್ ಕಾರ್ಯಕ್ರಮವನ್ನು ಅಭಿನಂದಿಸುತ್ತಾ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಅವರು ಮಾತನಾಡಿ,”ಕಲ್ಯಾಣ್ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸುಮಾರು ೨೫ ಸ್ಟಾರ್ಟ್ ಅಪ್ ಯೋಜನೆಗಳನ್ನು  ಹಮ್ಮಿಕೊಳ್ಳಲಾಗಿದೆ.೧೮ ದಿನಗಳ ಈ ಯಾತ್ರೆಯು ಇಡೀ ಕಲ್ಯಾಣ ಕರ್ನಾಟಕವನ್ನು ಒಳಗೊಂಡಿದೆ. ಕಲ್ಯಾಣ್ ಕರ್ನಾಟಕದ ಏಳು ಜಿಲ್ಲೆಗಳಾದ ವಿಜಯನಗರ, ಕಲ್ಬುರ್ಗಿ, ಯಾದಗಿರಿ,ಕೊಪ್ಪಳ, ರಾಯಚೂರು ,ಬಳ್ಳಾರಿ ಹಾಗು ಬೀದರ್ ಈ ಯೋಜನೆಯ ವ್ಯಾಪ್ತಿಯಲ್ಲಿ ಸೇರಿವೆ.  ಈ ಪ್ರದೇಶಗಳಲ್ಲಿ ಉದ್ಯಮಶೀಲತೆ, ಅಭಿವೃದ್ಧಿಯ ಆಂತರಿಕ ಜಾಲ ವನ್ನು ಸೃಷಿತಿಸುವ ಈ ಯೋಜನೆ ಯುವಜನರಲ್ಲಿ ಉತ್ತೇಜನ ತುಂಬುವುದರಲ್ಲಿ ಯಶಸ್ವಿ ಆಗುವುದರಲ್ಲಿ ಸಹಕಾರಿಯಾಗಲಿದೆ.”

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ , ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ದತ್ತಾತ್ರೇಯ ರೇವೂರ್,ಮಾತನಾಡಿ,”ಇಂಥ ಸ್ಟಾರ್ಟ್ ಅಪ್ ಗಳು ಹಿಂದುಳಿದ ಪ್ರದೇಶಗಳಲ್ಲಿ ಡಿಜಿಟಲ್ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತವೆ.ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಪ್ರಪ್ರಥಮವಾಗಿ ಜಾರಿಗೆ ತರುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಒದಗಿಸುವಲ್ಲಿ ಪೂರಕವಾಗಿವೆ.

ಕರ್ನಾಟಕ ಸರ್ಕಾರದ ಐಟಿ , ಬಿಟಿ  ಇಲಾಖೆಯ ಅಧಿಕಾರಿಗಳಾದ ಡಾ. ಈ.ವಿ .ರಮಣ ರೆಡ್ಡಿ ಮಾತನಾಡಿ,”
ELEVATE Idea2PoC initiative, ಮೂಲಕ ಈಗಾಗಲೇ ೨೦೧೫ ರಲ್ಲಿ ಇಂಥ ಕಾರ್ಯಾಗಾರಗಳಿಗೆ ಉತ್ತೇಜನ ನೀಡುವ ಬಗ್ಗೆ ಒಪ್ಪಿಗೆ ನೀಡಲಾಗಿತ್ತು.ಅದರ ಮುಂದುವರೆದ ಭಾಗವಾಗಿ ಹಣಕಾಸಿನ ನೆರವಿನ ಮೂಲಕ ಕಲ್ಯಾಣ ಕರ್ನಾಟಕದ ಪ್ರದೇಶಗಳಲ್ಲಿ ೨೫ ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸಲು ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಇದರ ಬಗೆಗಿನ ನೀತಿ ನಿರೂಪಣಾ ವಿನ್ಯಾಸವನ್ನು ಅಂತಿಮಗೊಳಿಸಲಾಗಿದೆ.

ವಿಷನ್ ಗ್ರೂಪ್ ಸ್ಟಾರ್ಟಪ್‌ ಕರ್ನಾಟಕ ಸರ್ಕಾರದ ಮತ್ತು  ಆಕ್ಸೆಲ್ ನ  ಅಧ್ಯಕ್ಷರಾದ ಶ್ರೀ. ಪ್ರಶಾಂತ್ ಪ್ರಕಾಶ್ ಮಾತನಾಡಿ ಕರ್ನಾಟಕವು ಅತ್ಯಂತ ರೋಮಾಂಚಕ ಮತ್ತು ಆರೋಗ್ಯಕರ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಪೋಷಿಸಿದೆ, ಇದು ಭಾರತಕ್ಕೆ ಮಾತ್ರವಲ್ಲದೆ ಆಸಿಯಾನ್ ಪ್ರದೇಶಕ್ಕೆ ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ. ELEVATE ಪ್ರೋಗ್ರಾಂ ಜಾಗತಿಕ ರೋಲ್ ಮಾಡೆಲ್ ಕಾರ್ಯಕ್ರಮವಾಗಿದ್ದು, 165+ ಕೋಟಿಗಳೊಂದಿಗೆ 720 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲವನ್ನು ಒದಗಿಸಿದೆ. ಎಲಿವೇಟ್ ಕಲ್ಯಾಣ ಕರ್ನಾಟಕ ಮೂಲಕ, ರಾಜ್ಯದಲ್ಲಿ ಲಭ್ಯವಿರುವ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಹೂಡಿಕೆಗಳು ಮತ್ತು ನೀತಿ ಮಧ್ಯಸ್ಥಿಕೆಗಳೊಂದಿಗೆ ಅವರನ್ನು ಬೆಂಬಲಿಸುವ ಮೂಲಕ ಉದ್ಯಮಿಗಳು / ಸ್ಟಾರ್ಟ್‌ಅಪ್‌ಗಳಿಗೆ ಸಹಾಯ ಮಾಡುವುದು ನಮ್ಮ ದೃಷ್ಟಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಕೆಡಿಇಎಂನ ಸಿಇಒ ಶ್ರೀ ಸಂಜೀವ್ ಗುಪ್ತಾ ಮಾತನಾಡಿ, “ಕೆಡಿಇಎಂನಲ್ಲಿ ಉದ್ಯೋಗ ನೀಡುವವರ (ಉದ್ಯಮಿಗಳ) ಸೃಷ್ಟಿಯನ್ನು ಉತ್ತೇಜಿಸುವುದು, ಕ್ಲಸ್ಟರ್‌ನಲ್ಲಿ ವರ ಪ್ರತಿಭೆಯ ವೇಗವರ್ಧನೆಯನ್ನು ಕಾರ್ಯಕ್ರಮಗಳ ಮೂಲಕ ಉತ್ತೇಜಿಸುವುದು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು, ಮಾಹಿತಿ ತಂತ್ರಜ್ಞಾನದಿಂದ ಬೇಡಿಕೆಯನ್ನು ಹೆಚ್ಚಿಸುವುದು ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಬೆಂಗಳೂರಿನ ಆಚೆಗಿನ ಈ ಕ್ಲಸ್ಟರ್‌ಗಳಲ್ಲಿ ಕಚೇರಿಗಳನ್ನು ಸ್ಥಾಪಿಸಲು ಕಂಪನಿಗಳು. ಉದ್ಯೋಗಾಕಾಂಕ್ಷಿಗಳಲ್ಲದೆ ಉದ್ಯೋಗ ನೀಡುವವರಾದ ಉದ್ಯಮಿಗಳನ್ನು ಸೃಷ್ಟಿಸುವುದು ನಮ್ಮ ದೃಷ್ಟಿ. ಎಲಿವೇಟ್ ಕಲ್ಯಾಣ ಕರ್ನಾಟಕದ ಮೂಲಕ, ಪರಿಣಾಮಕಾರಿ ಮಾರ್ಗದರ್ಶನ ಮತ್ತು ವೇಗವರ್ಧನೆ ಕಾರ್ಯಕ್ರಮಗಳ ಮೂಲಕ ಕಂಪನಿಗಳನ್ನು ಎಲಿವೇಟ್ ಮಾಡಲು ನಾವು ಬೆಂಬಲವನ್ನು ಖಚಿತಪಡಿಸುತ್ತೇವೆ. ಕಳೆದ ವರ್ಷ, ನಾವು 1500+ ಅರ್ಜಿದಾರರ ಜಿಗಿತಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ‘ಬೆಂಗಳೂರಿನಾಚೆಗಿನ’ ಕ್ಲಸ್ಟರ್‌ಗಳಲ್ಲಿ ದೃಢವಾದ ವಾಣಿಜ್ಯೋದ್ಯಮಿ ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿ ಮತ್ತು ಮೀರಿ ಹೋಗುವುದು ನಮ್ಮ ಗುರಿಯಾಗಿದೆ ಎಂದರು.

Filed in: Activities, Events, Placement and training Tags: 

Get Updates

Share This Post

Related Posts

© 2023 PROUD TIMES : ಪ್ರೌಢ ವಿಜಯ. All rights reserved.