0

ಇಂಧನ ಉಳಿತಾಯದ ತಂತ್ರಜ್ಞಾನ ಭಾರತದ ಪರಿಸರಕ್ಕೆ ತಕ್ಕಂತೆ ರೂಪುಗೊಳ್ಳಬೇಕು – ಬಿ.ಆರ್.ಗಣೇಶ್, ಜೆ.ಎಸ್.ಡಬ್ಲ್ಯೂ.

ಇಂಧನ ಉಳಿತಾಯದ ತಂತ್ರಜ್ಞಾನವು ಭಾರತದ ಪರಿಸರಕ್ಕೆ ತಕ್ಕಂತೆ ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಜೆ .ಎಸ್.ಡಬ್ಲ್ಯೂ. ಸ್ತೀಲ್ ಮೆಲ್ಟ್ ಶಾಪ್ ನಿರ್ವಹಣೆಯ ಜನರಲ್ ಮ್ಯಾನೇಜರ್ ಬಿ.ಆರ್.ಗಣೇಶ್ ಅಭಿಪ್ರಾಯಪಟ್ಟರು. ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಯುಕ್ತವಾಗಿ ಆಯೋಜಿಸಿದ್ದ ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ ಕಾರ್ಯಕ್ರಮ ದಿನಾಂಕ: ೨೩ /೧೨/೨೦೨೦ ಬುಧವಾರದಂದು ಎಲ್ .ಇ.ಡಿ. ದೀಪವನ್ನು ಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು. ಪಾಶ್ಚ್ಯಾತ್ಯ ಜೀವನ ಅನುಕರಣೆಯಿಂದಾಗಿ ಇಂಧನ ಬಳಕೆ ಮಿತಿ ಮೀರಿದೆ. ಭಾರತದ ಪರಿಸರಕ್ಕೆ ತಕ್ಕಂತೆ ನಮ್ಮ ಎಲ್ಲ ಕಟ್ಟಡಗಳು ಹಾಗೂ ಪರಿಕರಗಳನ್ನು ಮರು ವಿನ್ಯಾಸ ಮಾಡಬೇಕಾದ ಅಗತ್ಯವಿದೆ. ಪಾಶ್ಚತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸೂರ್ಯನ ಬೆಳಕು ಸರಿ ಸುಮಾರು ವರ್ಷದ ಏಳೆಂಟು ತಿಂಗಳು ಯಥೇಚ್ಛವಾಗಿ ಲಭ್ಯವಿದೆ. ಅದರ ಅನುಸಾರವಾಗಿ ನಮ್ಮ ’ಇಂಧನ ಜೀವನಶೈಲಿ’ ರೂಪುಗೊಳ್ಳಬೇಕಾಗಿದೆ. ನೈಸರ್ಗಿಕ ಶಕ್ತಿ ಸಂಪನ್ಮೂಲ ಬಳಸಿ ವಿದ್ಯುತ್ ತಯಾರಿಸುವುದರಿಂದ ಮುಂದಿನ ಪೀಳಿಗೆಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳನ್ನು ಸಂರಕ್ಷಿಸಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಸ್.ಎಂ.ಶಶಿಧರ್ ಮಾತನಾಡಿ ಅನವಶ್ಯಕ ವಿದ್ಯುತ್ ಬಳಕೆ, ವಿದ್ಯುತ್ ಅಪವ್ಯಯದಿಂದ ಅಪಾರವಾದ ಇಂಧನವು ಹಾಗು ಪರಿಸರ ನಾಶವಾಗುತ್ತಿದೆ. ಇದನ್ನು ತಡೆಗಟ್ಟಲು ವಿದ್ಯಾರ್ಥಿಗಳು ಸಾರ್ವಜನಿಕರಲ್ಲಿ ಇಂಧನ ಸಂರಕ್ಷಣಾ ಜಾಗೃತಿಯನ್ನು ಮೂಡಿಸಬೇಕು. ಇಂತಹ ಕಾರ್ಯಕ್ರಮಗಳು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಜನಜಾಗೃತಿ ಮೂಡಿಸುವಲ್ಲಿ ಸಹಾಯವಾಗಲಿದೆ ಎಂದರು. ಸಮಾರಂಭದ ಅಂಗವಾಗಿ ಮರ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆನ್ಲೈನ್ ಮೂಲಕ ಏರ್ಪಡಿಸಿದ್ದ ಇಂಧನ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಜ್ಯಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಕಾಲೇಜು ಮಟ್ಟದಲ್ಲಿ ಕು. ಭುವನೇಶ್ವರಿ ಪ್ರಥಮ ಸ್ಥಾನವನ್ನು , ಕು. ಬೃಂದಾ ದ್ವಿತೀಯ ಸ್ಥಾನವನ್ನು ಹಾಗೂ ಕು. ಐಶ್ವರ್ಯ ತೃತೀಯ ಸ್ಥಾನವನ್ನು ಪಡೆದರು. ಶಾಲಾ ಮಟ್ಟದಲ್ಲಿ. ಕು. ಸುಮಂತ್ ಜಿ. ಎಂ ಪ್ರಥಮ ಸ್ಥಾನವನ್ನು ಹಾಗೂ ಕು. ವಿಕ್ರಮ್ ಸೂರ್ಯ ದ್ವಿತೀಯ ಸ್ಥಾನವನ್ನು ಪಡೆದರು. ಕಾರ್ಯಕ್ರಮದಲ್ಲಿ ಭಾಗವಸಿದ ವಿದ್ಯಾರ್ಥಿಗಳಿಗೆ ಎಲ್.ಇ.ಡಿ ದೀಪಗಳನ್ನು ನೀಡುವ ವಿದ್ಯುತ್ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕೆ.ಆರ್.ಇ.ಡಿ.ಎಲ್. ನ ಧ್ಯೇಯ ಉದ್ದೇಶಗಳು, ಜಾಗೃತಿ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಮಹೇಶ್ ಓಬಣ್ಣನವರ್ ವಿವರಿಸಿದರು. ವಿದ್ಯುತ್ ಹಾಗು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಾದ ಪ್ರೊ . ಪ್ರಕಾಶ್ ಎಸ್ ಸ್ವಾಗತ ಭಾಷಣ ನೆರವೇರಿಸಿದರು ಕು. ಭುವನೇಶ್ವರಿ ಪ್ರಾರ್ಥಿಸಿದರು. ಪ್ರೊ.ಮಧ್ವರಾಜ ವಂದಿಸಿದರು. ಕು. ಫರ್ವಾ ಹಾಗೂ ಕು.ರಫಿಯ ಕಾರ್ಯಕ್ರಮದ ನಿರೂಪಣೆ ಮಾಡಿದರು. ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆನ್ಲೈನ್ ಮೂಲಕ ನೇರ ವೀಕ್ಷಣೆ ಮಾಡಿದರು.

 

Filed in: Sports Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.