0

ಎಂಜಿನಿಯರ್ಸ್ ದಿನಾಚರಣೆ: ಸರ್ ಎಂ ವಿಶ್ವೇಶ್ವರಯ್ಯ ಕೊಡುಗೆ ಅನನ್ಯ -ಡಾ. ಬಸವರಾಜ ಗಾದಗೆ

ನೂತನ ಭಾರತ ರೂಪುಗೊಳ್ಳುತ್ತಿದ್ದ ಕಾಲದಲ್ಲಿ ಇಂಜಿನಿಯರಿಂಗ್ ವಲಯದಲ್ಲಿಅದಕ್ಕೆ ಸರಿಯಾಗಿ ಸ್ಪಂದಿಸಿದ, ನಾಡಿನ ಜನತೆಯ ಅವಶ್ಯಕತೆಗಳನ್ನು ಅರ್ಥ ಮಾಡಿಕೊಂಡು ಅದನ್ನು ಈಡೇರಿಸಲು ಶ್ರಮಿಸಿದ, ಮೈಸೂರು ದೊರೆಗಳ ಜನಸ್ನೇಹಿ ಆಶಯಗಳನ್ನು ಕಾರ್ಯರೂಪಕ್ಕೆ ತಂದ ದೇಶಭಕ್ತ ದಿವಾನ್, ಮಹಾನ್ ಇಂಜಿನಿಯರ್ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ  ಕೊಡುಗೆ ಅನನ್ಯ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ವಲಯದ ಪ್ರಾದೇಶಿಕ ನಿರ್ದೇಶಕ ಡಾ. ಬಸವರಾಜ ಗಾದಗೆ ಹೇಳಿದರು.

ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಎಂಜಿನಿಯರ್ಸ್ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ದೇಶದ ಮೇರು ವ್ಯಕ್ತಿಯಾಗಿ ಬೆಳೆದ, ಬೆಳಗಿದ ಮತ್ತು ಜನರ ಬಾಳು ಬೆಳಗಿಸಿದ ಸರ್ ಎಂ.ವಿ. ಅವರು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ. ಅವರದು ಬೆಲೆ ಕಟ್ಟಲಾಗದ ಸಾಧನೆ ಮತ್ತು ಅವರ ದೂರಗಾಮಿ ಯೋಜನೆಗಳು ಇಂದಿಗೂ ಸಕಾಲಿಕವಾಗಿವೆ ಡಾ. ಬಸವರಾಜ ಗಾದಗೆ ಅಭಿಪಪ್ರಾಯಪಟ್ಟರು.
ರಾಷ್ಟ್ರದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತಾರೆ. ಎಂಜಿನಿಯರ್‌ಗಳು ದೇಶದ ಸಾಮಾಜಿಕ ಬದಲಾವಣೆ, ಅರ್ಥಿಕ ಅಭಿವೃದ್ಧಿ, ಯೋಜನೆಗಳ ಅನುಷ್ಟಾನದಲ್ಲಿ ಗುರುತರ ಪಾತ್ರ ವಹಿಸುತ್ತಾರೆ. ಎಂಜಿನಿಯರ್‌ಗಳು ದೇಶದ ಪರಿವರ್ತನೆಯ ಹರಿಕಾರರಾಗಬೇಕು ಎಂದು ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್‌ಎಂ.ಎಂ.ಶಶಿಧರ್ ಎಂಜಿನಿಯರ್‌ಗಳ ಸಮುದಾಯಕ್ಕೆ ಕರೆ ನೀಡಿದರು.
ವಿಶ್ವೇಶ್ವರಯ್ಯ ಅವರ ತತ್ವ, ಸಿದ್ದಾಂತ, ಆದರ್ಶ ಹಾಗೂ ತಂತ್ರಜ್ಞಾನವನ್ನು ಎಲ್ಲಾ ಇಂಜಿನಿಯರ್ ಗಳು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಅವರ ಮಾದರಿಯಂತೆ ಶ್ರಮಿಸಬೇಕು ಎಂದು ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಜಾನೇಕುಂಟೆ ಬಸವರಾಜ್ ಅವರು ಅಭಿಪ್ರಾಯಪಟ್ಟರು.
ಇಂದಿರಾ ಸ್ವಾಗತಿಸಿದರು ಹಾಗೂ ಡಾ ಎ.ವಿ.ವಿಜಯಕುಮಾರ್ ಅತಿಥಿ ಪರಿಚಯ ಮಾಡಿಕೊಟ್ಟರು. ಡಾ.ಪರಶುರಾಮ್ ಬಾರಕಿ  ವಂದನಾರ್ಪಣೆ ಸಲ್ಲಿಸಿದರು. ಪ್ರೊ ಎಸ್ ಡಿ ಮಂಜುಳಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Filed in: Activities, Events Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.