0

PDIT signed an MOU for the adoption of National Highway 50

 ಹೊಸಪೇಟೆ ೧೫-೦೭-೨೦೨೦

ರಾಷ್ಟ್ರೀಯ ಹೆದ್ದಾರಿ ೫೦ರ, ಹೊಸಪೇಟೆಯಿಂದ ಹುನಗುಂದದವರೆಗಿನ 97 ಕಿಮೀ ಉದ್ದದ ಹೆದ್ದಾರಿಯನ್ನು ಸಹಭಾಗಿತ್ವದಲ್ಲಿ ಉತ್ತಮಗೊಳಿಸಲು ಪರಸ್ಪರ ಒಪ್ಪಿಗೆಯ ತಿಳುವಳಿಕೆ ಪತ್ರಕ್ಕೆ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಹಿ ಹಾಕಿದೆ ಎಂದು ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್ಎಂ ಶಶಿಧರ್ ಅವರು ತಿಳಿಸಿದ್ದಾರೆ.

ಎನ್‌ಎಚ್‌ಎಐನ ಹೊಸಪೇಟೆಯ ಯೋಜನೆ ಅನುಷ್ಠಾನ ಘಟಕದ ಪ್ರಾಜೆಕ್ಟ್ ನಿರ್ದೇಶಕರಾದ ಅಜಯ್  ಮಣಿಕುಮಾರ್ ಮತ್ತು ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್ಎಂ ಶಶಿಧರ್ ಆವರು ಇಂದು ಸಹಿ ಹಾಕಿದ್ದಾರೆ.

ದೇಶದ ರಸ್ತೆ ಮೂಲಸೌಕರ್ಯ ಪರಿಸರ ವ್ಯವಸ್ಥೆಯ ಸುಧಾರಣೆಯತ್ತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಎನ್‌ಎಚ್‌ಎಐನ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಪಿಡಿಐಟಿಯ ಪ್ರಾಂಶುಪಾಲ ಡಾ.ಎಸ್ಎಂ ಶಶಿಧರ್ ಅವರು ತಿಳಿಸಿದರು. ರಾಷ್ಟ್ರದ ೪೫೦ಕ್ಕೂ ಹೆಚ್ಚು, ಕರ್ನಾಟಕ ರಾಜ್ಯದ ೬೬ ಹಾಗು ಬಳ್ಳಾರಿ ಜಿಲ್ಲೆಯ ಮೂರು ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳೊಂದಿಗೆ ಎನ್‌ಎಚ್‌ಎಐ ಇದೇ ಬಗೆಯ ತಿಳುವಳಿಕೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.

ವಿಶ್ವ ದರ್ಜೆಯ ಹೆದ್ದಾರಿ ಜಾಲ ನಿರ್ಮಿಸುವ ಎನ್‌ಎಚ್‌ಎಐ ಪ್ರಯತ್ನದಲ್ಲಿ, ಎಲ್ಲಾ ಐಐಟಿಗಳು, ಎನ್‌ಐಟಿಗಳು ಮತ್ತು ಹೆಸರಾಂತ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ವಯಂಪ್ರೇರಣೆ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಪಾಲುದಾರರನ್ನಾಗಿ ಮಾಡಿಕೊಳ್ಳಲು ರೂಪಿಸಿರುವ ಪ್ರಾಧಿಕಾರದ ನೂತನ ಯೋಜನೆಯ ಭಾಗವಾಗಿ ಈ ಒಪ್ಪಂದ ಏರ್ಪಟ್ಟಿದೆ ಎಂದು  ಎನ್‌ಎಚ್‌ಎಐನ ಹೊಸಪೇಟೆಯ ಯೋಜನೆ ಅನುಷ್ಠಾನ ಘಟಕದ ಪ್ರಾಜೆಕ್ಟ್ ನಿರ್ದೇಶಕರಾದ ಅಜಯ್  ಮಣಿಕುಮಾರ್ ಅವರು ತಿಳಿಸಿದರು.

ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗವಹಿಸುವಿಕೆಯ ಪ್ರಜ್ಞೆಯನ್ನು ಬೆಳೆಸುವ ಜೊತೆಗೆ, ವಿದ್ಯಾರ್ಥಿಗಳಿಗೆ ಕಲಿಕೆಗೆ, ಪ್ರಾಯೋಗಿಕ ತರಬೇತಿ, ಇಂಟರ್ನ್‌ಶಿಪ್‌ಗೆ ಆಯ್ಕೆ ಮತ್ತು ಭವಿಷ್ಯದ ಸಂಶೋಧನೆಯ ಕ್ಷೇತ್ರಗಳಿಗೆ ಅವಕಾಶವನ್ನು ಒದಗಿಸುತ್ತದೆ. ಟ್ರಾಫಿಕ್ ದಟ್ಟಣೆಯ ಅಧ್ಯಯನ, ಮತ್ತು ಅಪಘಾತ ಪೀಡಿತ ತಾಣಗಳ ಗುರುತಿಸುವಿಕೆಯಂತಹ ಸ್ಥಳೀಯ ಸಮಸ್ಯೆಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ.ಹೆದ್ದಾರಿಯ ಗುಣಮಟ್ಟ, ಹೊಸ ಆವಿಷ್ಕಾರಗಳ ಬಳಕೆ, ನಿರ್ವಹಣೆಯ ಅಧ್ಯಯನ, ಪ್ರಯಾಣಿಕ ಸ್ನೇಹಿ ಕ್ರಮಗಳ ಅನುಷ್ಟಾನ ಮುಂತಾದ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾದ  ಫಲಿತಗಗಳೊಂದಿಗೆ ಹೆದ್ದಾರಿ ಬಳಕೆದಾರರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂದು ಎಂದು ತಿಳುವಳಿಕೆ ಪತ್ರ ಹೇಳಿದೆ.

Filed in: Activities

Get Updates

Share This Post

Recent Posts

© 2023 PROUD TIMES : ಪ್ರೌಢ ವಿಜಯ. All rights reserved.