0

“ಹೆಣ್ಣು ಸಮಾಜದ ಕಣ್ಣು” -ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ

11 March 2020

ಹೆಣ್ಣು ಬ್ರೂಣ ಹತ್ಯೆ ಬ್ರಹ್ಮಾಂಡದ ಹತ್ಯೆ , ಅದು ಮಹಾ ಪಾಪ, ಹೆಣ್ಣು ಹುಣ್ಣಲ್ಲ ಸಮಾಜದ ಕಣ್ಣು ಎಂದು ನಾಡಿನ ಖ್ಯಾತ ವೈದ್ಯೆ, ಮಕ್ಕಳ ಹೃದ್ರೋಗ ತಜ್ಞೆ, ಲೇಖಕಿ, ಬಹುಮುಖ ಪ್ರತಿಭೆಯ ಅಪರೂಪದ ಸಾಧಕಿ  ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅಭಿಪ್ರಾಯ ಪಟ್ಟರು.

ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಕೋಶದಿಂದ ಆಯೋಜಿಸಲಾಗಿದ್ದ  ಮಹಿಳಾ ದಿನಾಚರಣೆ “ಮನಸ್ವಿ ೨೦೨೦” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಯುವಜನರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸುವುದು ವಿಷಾದಕರ, ಭಾರತದ ಸಂಸ್ಕೃತಿ ವಿಶ್ವದ ಶ್ರೇಷ್ಟ ಸಂಸ್ಕೃತಿಯಾಗಿದೆ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅರ್ಧನಾರೀಶ್ವರನು ಗಂಡು ಹೆಣ್ಣಿನ ಸಮಾನತೆಗೆ ಸಾಂಕೇತಿಕವಾಗಿದೆ  ಎಂದು ಅಭಿಪ್ರಾಯ ಪಟ್ಟರು.

ಜೇನು ನೊಣದಂತೆ ಹೂವಿಂದ ಹೂವಿಗೆ ಮಕರಂದವನ್ನು ಸವಿದು ಸದಾ ಶ್ರಮಿಸುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕೇ ವಿನಃ ನೊಣಗಳಂತೆ ಹೊಲಸು ಪದಾರ್ಥಗಳಲ್ಲಿ ಸಂಚರಿಸುವ ಹುಳವಾಗಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಜನಸಾಮಾನ್ಯರು ಕರೋನ ವೈರಸ್ ಬಗ್ಗೆ ಆತಂಕ ಪಡುವುದು ಬೇಡ. ವ್ಯಕ್ತಿ ಶುಚಿಯನ್ನು ಅನುಸರಿಸಿದರೆ ಎಲ್ಲ ರೋಗಗಳಿಂದ ದೂರವಿರಬಹುದು. ಕೈ ಹಾಗೂ ಬಾಯಿ ಶುದ್ಧವಿರಬೇಕೆಂದು ನಮ್ಮ ಹಿಂದಿನವರು ಹೇಳುತ್ತಿದ್ದರು, ಕೈಯನ್ನು ಚೆನ್ನಾಗಿ ಶುದ್ಧೀಕರಿಸುವುದರಿಂದ ಎಲ್ಲ ವೈರಾಣುಗಳ್ಳನ್ನು ನಾಶಪಡಿಸಬಹುದು. ವ್ಯಕ್ತಿ ಮೂಗಿನಿಂದ ಶೀನಿದಾಗ ಗಂಟಲಿನಲ್ಲಿದ್ದ ವೈರಾಣುಗಳು ಗಂಟೆಗೆ ೧೫೬ ಕಿ.ಮೀ ವೇಗದಲ್ಲಿ ಎದುರಿನ ವ್ಯಕ್ತಿಗೆ ವರ್ಗಾವಣೆಯಾಗುತ್ತದೆ. ಆದ್ದರಿಂದ ನಾವು ಶುಚಿಯನ್ನು ಕಾಪಾಡಬೇಕು, ಶುಚಿತ್ವವೇ ದೈವತ್ವ , ಶರೀರ ಹಾಗೂ ಮನಸ್ಸಿನ ಶುಚಿತ್ವವನ್ನು ಪಾಲಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಂ. ಶಶಿಧರ್ ಮಾತನಾಡಿ ಪುರುಷ ಹಾಗೂ ಮಹಿಳೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ , ಒಂದು ಹಕ್ಕಿಯ ಎರಡು ರೆಕ್ಕೆಗಳಂತೆ ಎಂದು ಸ್ವಾಮಿ ವಿವೇಕಾನಂದರ ಮಾತನ್ನು ನೆನಪಿಸಿದರು. ಮಹಿಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ ಎನ್ನುತ್ತಾರೆ ಎಂದು ಹೇಳಿದರು.  ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಜಾನೆಕುಂಟೆ ಬಸವರಾಜ್ ಮಾತನಾಡಿ ವರದಕ್ಷಿಣೆ ಒಂದು ಕ್ಯಾನ್ಸರ್ ಅದನ್ನು ಹೋಗಲಾಡಿಸಬೇಕು ಎಂದು ಹೇಳಿದರು. ಮನಸ್ವಿ ಕಾರ್ಯಕ್ರಮದ ಅಂಗವಾಗಿ ನಡೆದ ಹಲವು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಮಹಿಳಾ ಸಬಲೀಕರಣದ ಅಧ್ಯಕ್ಷರಾದ ಡಾ. ಶರಣಬಸಮ್ಮ ನಿರ್ವಹಿಸಿದರು. ಕು.ಮೇಘನಾ ಪ್ರಾರ್ಥಿಸಿದರು, ಪ್ರೊ. ಜೀವಿತ ನಿರೂಪಿಸಿದರು ಪ್ರೊ. ಇಂದಿರಾ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Filed in: Events Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.