ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ, ಹೊಸಪೇಟೆ
ದಿನಾಂಕ: 29/11/2022
ವಿಜಾಪುರದ ಬಿ.ಎಲ್. ಡಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ 28/11/2021 ಸೋಮವಾರದಂದು ನಡೆದ ವಿ.ಟಿ.ಯು. ಕಲ್ಬುರ್ಗಿ ವಿಭಾಗ ಮಟ್ಟದ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಿಡಿಐಟಿ ಕಾಲೇಜ್ ತಂಡವು ವಿಭಾಗ ಮಟ್ಟದ ಫೈನಲ್ಸ್ ನಲ್ಲಿ ೪೫-೧೬ ಅಂತರಗಳಿಂದ ಬಳ್ಳಾರಿಯ ಬಿ.ಐ.ಟಿ.ಎಂ.ಇಂಜಿನಿಯರಿಂಗ್ ಕಾಲೇಜಿನ ವಿರುದ್ಧ ಭರ್ಜರಿ ಜಯವನ್ನು ಸಾಧಿಸಿದೆ ಹಾಗೂ ಡಿಸೆಂಬರ್ ೨,೩ ಮತ್ತು ೪, ೨೦೨೨ ರಂದು ಬೆಂಗಳೂರಿನ ಏನ್.ಎಂ.ಐ. ಟಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿರುವ ವಿ.
ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಪಿ.ಡಿ.ಐ.ಟಿ.ಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಪಲ್ಲೇದ್ ದೊಡ್ಡಪ್ಪ, ಪಿ.ಡಿ.ಐ.ಟಿ.ಯ ಪ್ರಾಂಶುಪಾಲರಾದ ಡಾ. ಎಸ್.ಎಂ. ಶಶಿಧರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ. ಎಸ್ ಮಂಜುನಾಥ್, ಪ್ರಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗ, ವಿಜೇತರಾದ ಕ್ರೀಡಾ ಪಟುಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ ಹಾಗೂ ಮುಂದಿನ ಪಂದ್ಯಾವಳಿಗೆ ಶುಭ ಕೋರಿದ್ದಾರೆ .