0

ಕಲ್ಬುರ್ಗಿಯ ಪಿ. ಡಿ. ಎ. ಕಾಲೇಜು ಜಯಭೇರಿ : ಪಿ.ಡಿ.ಐ.ಟಿಯಲ್ಲಿ ವಿ.ಟಿ.ಯು ಕಲಬುರ್ಗಿ ವಿಭಾಗಮಟ್ಟದ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿ

ಪಿ.ಡಿ.ಐ.ಟಿ ,ಹೊಸಪೇಟೆ;02.11.2022:
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ.ಟಿ.ಯು ಕಲಬುರ್ಗಿ ವಿಭಾಗಮಟ್ಟದ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭವನ್ನು ದಿನಾಂಕ ನವಂಬರ್ ೨ ರಂದು ಬೆಳಗ್ಗೆ ೯: ೩೦ ಕ್ಕೆ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ  ಪುರುಷರ  ವಿಭಾಗದಲ್ಲಿ ಕಲ್ಬುರ್ಗಿಯ ಪಿ. ಡಿ. ಎ ಕಾಲೇಜಿನ ವಿದ್ಯಾರ್ಥಿಗಳು ೩-೨ ಅಂತರದಿಂದ ವಿಜಯವನ್ನು ಸಾಧಿಸಿದರು. ಎರಡನೇ ಸ್ಥಾನವನ್ನು  ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಪಡೆಯಿತು ಹಾಗೂ ಮಹಿಳೆಯರ ವಿಭಾಗದಲ್ಲಿಯೂ ಸಹ  ಕಲ್ಬುರ್ಗಿಯ ಪಿ. ಡಿ. ಎ ಕಾಲೇಜಿನ ವಿದ್ಯಾರ್ಥಿನಿಯರು  ೩-೦  ಅಂತರದಿಂದ ಜಯಭೇರಿ  ಸಾಧಿಸಿದರು. ಎರಡನೇ ಸ್ಥಾನವನ್ನು ಬಳ್ಳಾರಿಯ ಬಿ.ಐ.ಟಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರು  ತಮ್ಮದಾಗಿಸಿಕೊಂಡರು. ಈ ಪಂದ್ಯಾವಳಿಗಳಲ್ಲಿ ಕಲ್ಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಮುಧೋಳ ಹಾಗೂ ಹೊಸಪೇಟೆಯ ಕಾಲೇಜಿನ ಪುರುಷರ ೮ ತಂಡಗಳು ಹಾಗೂ ಮಹಿಳೆಯರ ೭ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಗಳ  ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಟೆನ್ನಿಸ್ ಆಟಗಾರರಾದ ಶ್ರೀ ಗಾಳಿ ಶಿವಕುಮಾರ, ಅತಿಥಿಗಳಾಗಿ ವಿಜಯನಗರ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಅಸುಂಡಿ ನಾಗರಾಜ್ ಹಾಗೂ ಕಲ್ಬುರ್ಗಿಯ ಪಿ. ಡಿ. ಎ. ಕಾಲೇಜಿನ   ದೈಹಿಕ ಶಿಕ್ಷಕ ನಿರ್ದೇಶಕರಾದ ಶ್ರೀ ಎಸ. ಆರ್. ತೊಲೆ  ಆಗಮಿಸಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ  ಪಲ್ಲೇದ ದೊಡ್ಡಪ್ಪ ವಹಿಸಿದ್ದರು.
ಕಾರ್ಯಕ್ರಮದಲ್ಲಿ  ಉಪ ಪ್ರಾಂಶುಪಾಲ ಡಾ. ಯು.ಎಂ. ರೋಹಿತ್ ಪ್ರಾಸ್ತಾವಿಕ ಭಾಷಣ ನೆರೆವೇರಿಸಿದರು, ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕರಾದ ಶ್ರೀ ಕೆ. ಎಸ್. ಮಂಜುನಾಥ್ ರವರು ಕಾರ್ಯಕ್ರಮವನ್ನು  ನೀರೂಪಿಸಿದರು, ಕು. ಶ್ರಾವಣಿ ಸಂಗಡಿಗರು  ಪ್ರಾರ್ಥಿಸಿದರು. ಪ್ರೊ. ವಿನಯ್ ಸ್ವಾಗತಿಸಿದರು. ಪ್ರೊ. ಮಧ್ವರಾಜ್ ವಂದಿಸಿದರು. ವಿವಿಧ ವಿಭಾಗದ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Filed in: Activities, Sports Tags: 

Get Updates

Share This Post

Related Posts

© 2023 PROUD TIMES : ಪ್ರೌಢ ವಿಜಯ. All rights reserved.