0

ಶಿಕ್ಷಣದಲ್ಲಿ ಕ್ರೀಡೆಗಳು ಬಹುಮುಖ್ಯ -ಡಾ. ಪ್ರವೀಣ್ ಸಿಂಗ್

ಶಿಕ್ಷಣದಲ್ಲಿ ಕ್ರೀಡೆಗಳು ಬಹುಮುಖ್ಯ; ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ, ಮನಶ್ಯಾಂತಿ ನಾಯಕತ್ವದ ಗುಣ ಲಭಿಸುತ್ತವೆ  ಎಂದು  ವಾಲಿಬಾಲ್ ಕ್ರೀಡೆಯ ರಾಷ್ಟ್ರೀಯ ತರಬೇತಿದಾರರಾದ ಡಾ. ಪ್ರವೀಣ್ ಸಿಂಗ್ ಅವರು ಹೇಳಿದರು.
ಅವರು ದಿನಾಂಕ 29.06.2022 ಬುಧವಾರದಂದು ಸಂಜೆ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಿಂಚನ 2022 ಕಾರ್ಯಕ್ರಮದ ಮೊದಲನೆ ದಿನವಾದ ಕ್ರೀಡಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಜೀವನ ದಿನದಿಂದ ದಿನಕ್ಕೆ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ ಇದರಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ಸಾಮರ್ಥ್ಯ  ಹಾಗೂ ಸಮಚಿತ್ತ ಲಭಿಸುತ್ತವೆ. ಇದರಿಂದ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ. ಕ್ರೀಡೆಗಳ ಪ್ರಾಮುಖ್ಯತೆಯನ್ನು ಶಿಕ್ಷಣ ತಜ್ನ್ಣರು ಮನಗಂಡಿದ್ದು, ಕ್ರೀಡೆಗಳನ್ನು ಶಿಕ್ಷಣದ ಒಂದು ಭಾಗವಾಗಿರುವಂತೆ ರೂಪಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ  ಬಿ.ವಿ ಬಸವರಾಜ್ ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಬಹು ಮುಖ್ಯ, ನಿರಂತರ ಭಾಗವಹಿಸುವಿಕೆಯಿಂದ ಕ್ರೀಡಾ ಕೌಶಲ್ಯಗಳು ಹೆಚ್ಚುವುದರಿಂದ ಗೆಲುವು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ  ಎಚ್.ಎಂ.ಗುರುಸಿದ್ದಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ ಕಾಲೇಜಿಗೆ ಕೀರ್ತಿ ಮತ್ತು ಘನತೆ ತರುವಲ್ಲಿ ನಿಮ್ಮ ಪಾತ್ರ ತುಂಬ ದೊಡ್ಡದು ಮತ್ತು ನಿಮ್ಮನ್ನು ಸಮಾಜ ಗುರುತಿಸಿ ಗೌರವಿಸುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವೀ.ವಿ. ಸಂಘದ ಸಹಕಾರ್ಯದರ್ಶಿ  ದರೂರ್ ಶಾಂತನಗೌಡ ಹಾಗೂ ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ  ಪಲ್ಲೇದ ದೊಡ್ಡಪ್ಪ,  ಆಡಳಿತ ಮಂಡಳಿಯ ಸದಸ್ಯರುಗಳಾದ  ಜ್ಯೋತಿ ಮಹಾಬಲೇಶ್ವರ, ,  ಎಚ್ ಎಂ ಉದಯ ಶಂಕರ್,  ಉಪ ಪ್ರಾಂಶುಪಾಲ ಡಾ. ಯು.ಎಂ. ರೋಹಿತ್  ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎಂ.ಶಶಿಧರ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ  ಕೆ. ಎಸ್. ಮಂಜುನಾಥ್ ಕ್ರೀಡಾ ಪಟುಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.
ಪ್ರೊ. ಮಾಲತೇಶ್ ಹಾಗೂ ಪ್ರೊ. ಇಂದಿರಾ  ನಿರೂಪಿಸಿದರು. ಕು. ಅನುಪಮಾ ಪ್ರಾರ್ಥನೆ ಗೀತೆ ಹಾಡಿದರು. ಸಿಂಚನ 2022 ವಾರ್ಷೀಕೋತ್ಸವದ ಮುಖ್ಯ ಸಂಯೋಜಕರಾದ ಡಾ.ಪ್ರತಾಪ್ ಕುಲಕರ್ಣಿ ವಂದಿಸಿದರು.
ನಂತರ,  ಖ್ಯಾತ ರ್ಯಾಪ್  ಗಾಯಕರಾದ ಆಲ್ ಓಕೆ ತಂಡದ ಅಲೋಕ್ ಬಾಬು ಹಾಗೂ ಸಂಗಡಿಗರಿಂದ ಸಂಗೀತ ರಸಸಂಜೆ ಕಾರ್ಯಕ್ರಮವನ್ನು  ನಡೆಸಿಕೊಟ್ಟರು.  ಸಾವಿರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Filed in: Sports Tags: 

Get Updates

Share This Post

Related Posts

© 2022 PROUD TIMES : ಪ್ರೌಢ ವಿಜಯ. All rights reserved.