0

“ವೃತ್ತಿಯ ಆಯ್ಕೆ ಪ್ರವೃತ್ತಿಗೆ ಅನುಗುಣವಾಗಿರಲಿ”-ರತ್ನಪ್ರಸಾದ್ ಅಟ್ಲೂರಿ

 ವ್ಯಕ್ತಿಯು ತಾನು ಆಯ್ದುಕೊಳ್ಳುವ ವೃತ್ತಿಯು ತನ್ನ ಪ್ರವೃತ್ತಿಗಳಿಗೆ ಅನುಗುಣವಾಗಿದ್ದಾಗ ಅವನ ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆಎಂದು ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್ ಗಿಣಿಗೇರಾದ ಸಿಇಓ ರತ್ನಪ್ರಸಾದ್ ಅಟ್ಲೂರಿ ಅಭಿಪ್ರಾಯ ಪಟ್ಟರು.

ಅವರು ದಿನಾಂಕ 30.06.2022 ಗುರುವಾರದಂದು ಸಂಜೆ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವದ  ‘ಸಿಂಚನ-2022′ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರಸ್ತುತ ಕೈಗಾರಿಕಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಅರಿತು ವೃತ್ತಿಪರ ಕೌಶಲ್ಯದ ಕಡೆಗೆ ಮಹತ್ವವನ್ನು ನೀಡಬೇಕು. ಯಾವುದೇ ರೀತಿಯ ಸವಾಲುಗಳು ಬಂದರೂ  ಕೈಚೆಲ್ಲದೆ ಎದುರಿಸಲು ಸಿದ್ಧರಾಗಿರಬೇಕುನಮ್ಮ ಪ್ರಧಾನಿಯವರು ಭಾರತವನ್ನು ಜಗತ್ತಿನ ದೊಡ್ಡ ಔದ್ಯಮಿಕ ಉತ್ಪಾದನಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿತ್ತಿದ್ದಾರೆ. ನಮ್ಮ ದೇಶವು ಪ್ರಪಂಚದಲ್ಲೇ ಸ್ಟೀಲ್ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆಎಂದು ತಿಳಿಸಿದರು.

ಇನ್ನೋರ್ವ ಅತಿಥಿಗಳಾದ ಎಂ.ಎಸ್.ಪಿ.ಎಲ್. ಸಂಸ್ಥೆಯ ಜನರಲ್ ಮ್ಯಾನೇಜರ್ (ಸಿ.ಎಸ್.ಆರ್) ಎಚ್.ಕೆ.ರಮೇಶ್ ಮಾತನಾಡಿ ವಿದ್ಯಾರ್ಥಿಗಳು ಸಮಾಜ ಸ್ವೀಕರಿಸುವ  ಉತ್ಪನ್ನಗಳನ್ನು ತಯಾರಿಸುವ ದಿಸೆಯಲ್ಲಿ ಚಿಂತನೆ ಮಾಡಬೇಕು ಎಂದು ಹೇಳಿದರು.

   ಸಮಾರಂಭದಲ್ಲಿ ಕಾಲೇಜಿನ ಆರು ವಿಭಾಗಗಳ  ಪ್ರತಿಭಾವಂತ ಟಾಪರ್ಸ್ ಗಳಾದ   ಮ್ಯೆಕಾನಿಕಲ್ ವಿಭಾಗದ ಸಲೀಂ ಹುಸೇನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಪುರುಷೋತ್ತಮ್ ಪಂಚಮುಖಿ, ಗಣಕಯಂತ್ರ ವಿಭಾಗದ ಚೈತ್ರ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಫಾತಿಮಾ ಜೆಹ್ರಾ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಭುವನೇಶ್ವರಿ, ಎಂ.ಬಿ.. ವಿಭಾಗದ ಮುಮ್ತಾಜ್ ಇಮ್ತಿಯಾಜ್ ಅವರಿಗೆ ಎಂ.ಎಸ್.ಪಿ.ಎಲ್. ಸಂಸ್ಥೆಯಿಂದ ಪ್ರಾಯೋಜಿತ ಚಿನ್ನದ ಪದಕಗಳನ್ನು ನೀಡಿ ಪುರಸ್ಕರಿಲಾಯಿತು.

ಪ್ರಾಂಶುಪಾಲ ಡಾ. ಎಸ್.ಎಂ.ಶಶಿಧರ್ ಕಾಲೇಜಿನ ವಾರ್ಷಿಕ ವರದಿಯನ್ನು ಪ್ರಸ್ತುತಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ  ಎಚ್.ಎಂ.ಗುರುಸಿದ್ದಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ ಕಾಲೇಜಿಗೆ ಕೀರ್ತಿ ಮತ್ತು ಘನತೆ ತರುವಲ್ಲಿ ನಿಮ್ಮ ಪಾತ್ರ ತುಂಬ ದೊಡ್ಡದು ಮತ್ತು ನಿಮ್ಮನ್ನು ಸಮಾಜ ಗುರುತಿಸಿ ಗೌರವಿ ಸುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಳೆದ ಮೂರೂ ವರ್ಷಗಳ ಎಲ್ಲಾ ವಿಭಾಗಗಳ  ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ 18 ವಿದ್ಯಾರ್ಥಿಗಳಿಗೆ  ವೀ.ವಿ. ಸಂಘದ ವತಿಯಿಂದ ತಲಾ ಹತ್ತು ಸಾವಿರ ಮೊತ್ತದ ನಗದು ಬಹುಮಾನಗಳನ್ನು ವಿತರಿಸಿಲಾಯಿತು. ಸಂದರ್ಭದಲ್ಲಿ ಡಾಕ್ಟರೇಟ್ ಪಡೆದ ಕಾಲೇಜಿನ ಏಳು ಉಪನ್ಯಾಸಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ವೀ.ವಿ. ಸಂಘದ ಉಪಾಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಕೋರಿ ವಿರೂಪಾಕ್ಷಪ್ಪ, ಕರಿಬಸವರಾಜ ಬಾದಾಮಿ, ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ  ಪಲ್ಲೇದ ದೊಡ್ಡಪ್ಪ, ಆಡಳಿತ ಮಂಡಳಿಯ ಸದಸ್ಯರಾದ  ಜ್ಯೋತಿ ಮಹಾಬಲೇಶ್ವರ ಹಾಗೂ ಅಜೀವ ಸದಸ್ಯರುಗಳು, ಉಪ ಪ್ರಾಂಶುಪಾಲ ಡಾ. ಯು.ಎಂ. ರೋಹಿತ್, ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಕಾಲೇಜಿನ ಡಾ. ಶರಣಬಸಮ್ಮ  ಸ್ವಾಗತಿಸಿದರು.   ಡಾ. ಮಂಜುಳಾ ಎಸ್ ಡಿ. ಮತ್ತು ಪ್ರೊ. ಶಮಿತಾ ಎಚ್ ಎಂ  ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು. ಪ್ರೊ. ರವಿಕುಮಾರ್  ಎಸ್.ಪಿ  ಹಾಗೂ ಪ್ರೊ.ವೀಣಾ  ನಿರೂಪಿಸಿದರು. ಕು.ಸಹನಾ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಸಿಂಚನ 2022 ವಾರ್ಷೀಕೋತ್ಸವದ ಮುಖ್ಯ ಸಂಯೋಜಕರಾದ ಡಾ.ಪ್ರತಾಪ್ ಕುಲಕರ್ಣಿ ವಂದಿಸಿದರು..

ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಅದರಲ್ಲಿವಿಜಯನಗರ ವೈಭವರೂಪಕ ಮತ್ತು ಫ್ಯಾಷನ್ ಷೋ ಮನಮೋಹಕವಾಗಿದ್ದವು. ಸಾವಿರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Filed in: Sports Tags: 

Get Updates

Share This Post

Related Posts

© 2022 PROUD TIMES : ಪ್ರೌಢ ವಿಜಯ. All rights reserved.