ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ , ಹೊಸಪೇಟೆ
ದಿನಾಂಕ : 13 /12 /2021 ಸೋಮವಾರ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಟಿಯು ಮಟ್ಟದ ಬೆಂಗಳೂರು ವಲಯ ಹೊರತುಪಡಿಸಿ ಮಹಿಳಾ ಬಾಸ್ಕೆಟ್ ಬಾಲ್ ಪಂದ್ಯಾವಳಿಗಳು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ದಿನಾಂಕ 12 ಮತ್ತು 13 ರಂದು ಜರುಗಿದವು. ಪಂದ್ಯಾವಳಿಯಲ್ಲಿ ಒಟ್ಟು 8 ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.
ಅಂತಿಮ ಸುತ್ತಿನ ಪಂದ್ಯದಲ್ಲಿ ಮೈಸೂರಿನ ಪ್ರಸಿದ್ಧ ಕಾಲೇಜುಗಳಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್, ಹಾಗೂ ವಿದ್ಯಾವರ್ಧಕ ತಾಂತ್ರಿಕ ಕಾಲೇಜು ತಂಡಗಳು ಮುಖಾಮುಖಿಯಾಗಿ ಸೆಣಸಿದವು. ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್ (ಎನ್ಐಇ)
ತಂಡವು 25-23 ಅಂಕಗಳಿಂದ ಗೆಲುವು (ವಿನ್ನರ್ಸ್) ಗಳಿಸಿ, ಟ್ರೋಫಿ ಪಡೆಯಿತು ವಿದ್ಯಾವರ್ಧಕ ತಾಂತ್ರಿಕ ಕಾಲೇಜು (ವಿವಿಸಿಇ) ಮೈಸೂರು ತಂಡ ದ್ವಿತೀಯ ಸ್ಥಾನ (ರನ್ನರ್ಸ್) ಪಡೆಯಿತು.
ಇದಕ್ಕೂ ಮುನ್ನ ಜರುಗಿದ ಸೆಮಿಫ಼ೈನಲ್ ಪಂದ್ಯದಲ್ಲಿ ಎನ್ ಐ.ಇ, ಮೈಸೂರು, ತಂಡವು ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ ಇಂಜಿನಿಯರಿಂಗ್ ಕಾಲೇಜಿನ ತಂಡವನ್ನು ಸೋಲಿಸಿ ಫ಼ೈನಲ್ಸ್ ಪ್ರವೇಶಿಸಿತ್ತು. ಹಾಗೂ ವಿದ್ಯಾವರ್ಧಕ ತಾಂತ್ರಿಕ ಕಾಲೇಜು, ಮೈಸೂರು ತಂಡವು ನಿಟ್ಟೆಯ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡವನ್ನು ಸೋಲಿಸಿ ಫ಼ೈನಲ್ಸ್ ಪ್ರವೇಶಿಸಿತ್ತು.
ಈ ಪಂದ್ಯಾವಳಿಯಲ್ಲಿ ರಾಜ್ಯದ ಹಲವಾರು ಕಡೆಗಳಿಂದ ಬಂದಿರುವ ಎಂಟು ತಂಡಗಳು (1) ಎನ್ ಐ.ಇ, ಮೈಸೂರು, (2) ಎನ್ ಐ. ಇ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೈಸೂರು, (3) ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಮಂಗಳೂರು (4) ಕೆ.ಎಲ್.ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹುಬ್ಬಳ್ಳಿ (5) ವಿದ್ಯಾವರ್ಧಕ ತಾಂತ್ರಿಕ ಕಾಲೇಜು, ಮೈಸೂರು (6) ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ (7) ಪಿಡಿಐಟಿ, ಹೊಸಪೇಟೆ ಹಾಗೂ (8) ನಿಟ್ಟೆಯ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜುಗಳ ವಿದ್ಯಾರ್ಥಿನಿಯರು ಪಂದ್ಯಾವಳಿಯಲ್ಲಿ ಭಾಗವಹಿದ್ದರು.
ಕಾರ್ಯಕ್ರಮದಲ್ಲಿ ಪಿಡಿಐಟಿಯ ಆಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ ಅಧ್ಯಕ್ಷತೆ ವಹಿಸಿದ್ದರು. ವೀ.ವಿ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಆಕ್ಕಿ ಶಿವಕುಮಾರ ಹಾಗೂ ಉದ್ಯಮಿ ಕೆ.ಬಿ.ಶ್ರೀನಿವಾಸ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಣೆ ಮಾಡಿದರು. ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್, ದೈಹಿಕ ನಿರ್ದೇಶಕ ಕೆ.ಎಸ್.ಮಂಜುನಾಥ್, ಕ್ರೀಡಾ ಸಂಚಾಲಕರಾದ ಎ.ಗಿರೀಶ್, ಡಾ.ಪ್ರಮೋದ್, ಪಿ.ವಿನಯ್ ಉಪಸ್ಥಿತರಿದ್ದರು.