0

ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಸಹಕಾರಿ – ಗುರುಸಿದ್ದಸ್ವಾಮಿ

ಹೊಸಪೇಟೆ: ದಿನಾಂಕ  : 12 /12 /2021   ರವಿವಾರ  ಮುಂಜಾನೆ ೧೦  ಘಂಟೆಗೆ

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ, ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುರುಸಿದ್ದಸ್ವಾಮಿ ಅಭಿಪ್ರಾಯ ಪಟ್ಟರು .

ಅವರು ಹೊಸಪೇಟೆ ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ, ದಿನಾಂಕ ೧೨ ಭಾನುವಾರದಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ರಾಜ್ಯಮಟ್ಟದ (ಬೆಂಗಳೂರು ವಲಯ ಹೊರತುಪಡಿಸಿ) ಎರಡು ದಿನಗಳ ಮಹಿಳಾ ಬಾಸ್ಕೆಟ್ ಬಾಲ್ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡುತಿದ್ದರು.
“ಕ್ರೀಡೆಗಳು ಸ್ಪರ್ಧಾ ಮನೋಭಾವ ಮೂಡಿಸುತ್ತವೆ. ಸೋಲು– ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಮೈಗೂಡಿಸಿಕೊಳ್ಳಬಹುದು. ಜೀವನದ ಸಮಸ್ಯೆಗಳನ್ನು ನಿಭಾಯಿಸಲು ಕ್ರೀಡೆಗಳು ಸಹಕಾರಿ” ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿ.ಟಿ.ಯು.ನ ನಿವೃತ್ತ ಕ್ರೀಡಾ ಸಹ ನಿರ್ದೇಶಕರಾದ ಡಾ. ಸಯೀದುದ್ದೀನ್ ರವರು ಮಾತನಾಡಿ “ಬಾಸ್ಕೆಟ್ ಬಾಲ್ ಕ್ರೀಡೆಯು  ಎಲ್ಲ ಕ್ರೀಡೆಗಳಗಿಂತ ಅತ್ಯಂತ ಕಡಿಮೆ ಅವಧಿಯ ಪಂದ್ಯವಾಗಿದೆ. ಸಮಯದ ಅಭಾವ ಎದುರಿಸುವ  ತಾಂತ್ರಿಕ ವಿದ್ಯಾರ್ಥಿಗಳಿಗೆ ಬಾಸ್ಕೆಟ್ ಬಾಲ್ ಹೇಳಿ ಮಾಡಿಸಿದ ಕ್ರೀಡೆಯಾಗಿದೆ” ಎಂದು ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯ ಮಟ್ಟದ ಕ್ರಿಡಾಕೂಟವನ್ನು ಆಯೋಜಿಸಿದಕ್ಕಾಗಿ ಕಾಲೇಜು ಆಡಳಿತ ಮಂಡಳಿಯನ್ನು ಅಭಿನಂದಿಸಿದರು.

ಸಮಾರಂಭದಲ್ಲಿ ಪಿಡಿಐಟಿ .ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ದೊಡ್ಡಪ್ಪ  ಅವರು ಮಾತನಾಡಿ “ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ತಾವೆಲ್ಲರೂ ಅತ್ಯಂತ ಉತ್ಸಾಹದಿಂದ ಮತ್ತು ಕ್ರೀಡಾ ಮನೋಭಾವದಿಂದ ಭಾಗವಹಿಸಿ, ಅತ್ಯುತ್ತಮ ನೆನಪುಗಳೊಂದಿಗೆ ತಮ್ಮ ತಮ್ಮ ಸ್ಥಳಗಳಿಗೆ ತೆರಳುವಂತಾಗಲಿ” ಎಂದು ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ  ಡಾ ಎಸ್ .ಎಂ ಶಶಿಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕ್ರೀಡೆಗೆ ಉತ್ತೇಜನ ನೀಡುವಂತಹ ಸವಲತ್ತುಗಳನ್ನು ಅಭಿವೃದ್ಧಿ ಪಡಿಸಬೇಕು. ಆ ಮೂಲಕ ಕೆಳ ಹಂತದಿಂದ ಕ್ರೀಡಾಪಟುಗಳು ಮೇಲೆ ಬರಲು ಮತ್ತು ಚಾಂಪಿಯನ್ ಆಟಗಾರರು ಮೂಡಿಬರಲು ಸಾಧ್ಯವಾಗುತ್ತದೆ, ಕ್ರೀಡಾ ಲೋಕದಲ್ಲಿ ಸಾಧನೆ ಮಾಡಿ ಕೀರ್ತಿ ಪಡೆಯಬೇಕಿದ್ದಲ್ಲಿ ಕ್ರಿಕೆಟ್ನಿಂದ ಮಾತ್ರ ಸಾಧ್ಯ ಎಂಬ ತಪ್ಪು ಕಲ್ಪನೆಯು ದೇಶದ ಯುವ ಜನತೆಯಲ್ಲಿ ದೂರವಾಗಬೇಕುಎಂದು ಹೇಳಿದರು.
ಈ  ಸಮಾರಂಭದಲ್ಲಿ  ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಡಾ. ಶರಣಬಸಮ್ಮ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ. ಮಧ್ವರಾಜ ಸ್ವಾಗತಿಸಿದರು.  ಕುಮಾರಿ ಸೌಮ್ಯ ಹಾಗೂ ಸಂಗೀತ ಪ್ರಾರ್ಥನಾ ಗೀತೆ ಪ್ರಸ್ತುತ ಪಡಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಮಂಜುನಾಥ ಕೆ.ಎಸ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರೊ. ವಿನಯ್ ಕುಮಾರ್  ವಂದಿಸಿದರು.

ಈ ಪಂದ್ಯಾವಳಿಯಲ್ಲಿ ರಾಜ್ಯದ ಹಲವಾರು ಕಡೆಗಳಿಂದ ಬಂದಿರುವ ಎಂಟು ತಂಡಗಳು (೧) ಎನ್ ಐ.ಇ, ಮೈಸೂರು, (೨) ಎನ್ ಐ. ಇ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೈಸೂರು, (೩) ಸೇಂಟ್ ಜೋಸೆಫ್ ಇಂಜಿನಿಯರಿಂಗ್  ಕಾಲೇಜು, ಮಂಗಳೂರು (೪) ಕೆ.ಎಲ್.ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹುಬ್ಬಳ್ಳಿ (೫) ವಿದ್ಯಾವರ್ಧಕ ತಾಂತ್ರಿಕ ಕಾಲೇಜು, ಮೈಸೂರು (೬) ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ (೭) ಪಿಡಿಐಟಿ, ಹೊಸಪೇಟೆ  ಹಾಗೂ  (೮) ನಿಟ್ಟೆಯ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜುಗಳ ವಿದ್ಯಾರ್ಥಿನಿಯರು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

Filed in: Sports Tags: 

Get Updates

Share This Post

Related Posts

© 2023 PROUD TIMES : ಪ್ರೌಢ ವಿಜಯ. All rights reserved.