0

ಕ್ಯಾನ್ಸರ್:ಆರಂಭಿಕ ಪತ್ತೆ ಚಿಕಿತ್ಸೆಯಲ್ಲಿ ನಿರ್ಣಾಯಕ ಡಾ. ವಿನಯ್ ಮುತ್ತಿಗಿ

ದಿನಾಂಕ: ೩೦/೧೧/೨೦೨೧, ಮಂಗಳವಾರ

ಪಿಡಿಐಟಿಯಲ್ಲಿ ಕ್ಯಾನ್ಸರ್ ಜಾಗೃತಿ ಹಾಗು ತಪಾಸಣಾ ಶಿಬಿರ

ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಗುಣವಾಗುವುದು ಸುಲಭ ಹಾಗು ಚಿಕಿತ್ಸೆ ಪರಿಣಾಮಕಾರಿಯಗುವುದು ಎಂದು ಹುಬ್ಬಳ್ಳಿಯ ಎಚ್.ಸಿ.ಜಿ  ಕ್ಯಾನ್ಸರ್ ಆಸ್ಪತ್ರೆಯ ವೈದ್ಯ ಡಾ. ವಿನಯ್ ಮುತ್ತಿಗಿ ಹೇಳಿದರು.

ಅವರು ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಘಟಕ ಹಾಗೂ ಹುಬ್ಬಳ್ಳಿಯ ಎಚ್.ಸಿ.ಜಿ. ಕ್ಯಾನ್ಸರ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ  ಕ್ಯಾನ್ಸರ್ ಕುರಿತು ಅರಿವು ಮತ್ತು ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತಿದ್ದರು.

ಕಿಶೋರ ವಯಸ್ಸಿನಿಂದಲೇ ಹೆಣ್ಣುಮಕ್ಕಳಲ್ಲಿ ಈ ವಿಷಯದ ಬಗ್ಗೆ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಮಹಿಳೆಯರಿಗೆ  ಸಹಜವಾದ ಸಂಕೋಚ, ಅನಗತ್ಯ ಹೆದರಿಕೆ, ನಿರ್ಲಕ್ಷ್ಯ ಮುಂತಾದ ಕಾರಣಗಳು ಈ ಸಮಸ್ಯೆ ಇನ್ನಷ್ಟು ಉಲ್ಬಣವಾಗಲು ಕಾರಣವಾಗಿವೆ. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಮಹಿಳೆಯರಲ್ಲಿ ಆರೋಗ್ಯದ ಎಚ್ಚರ ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಹೊಸಪೇಟೆಯ ಸಿಟಿ ಆಸ್ಪತ್ರೆಯ ವೈದ್ಯೆ ಡಾ. ನಾಜ್ ಜಹಾನ್ ಶೇಕ್  ಅವರು ಮಾತನಾಡಿ ಕಾನ್ಸರ್ ರೋಗವು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್ ಬಗೆಗೆ ಅರಿವು ಅವಶ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಂ.ಶಶಿಧರ್ ಮಾತನಾಡಿ,”ಕ್ಯಾನ್ಸರ್ ಎಂದ ಕೂಡಲೇ ಭಯ ಬೇಡ, ನಿರ್ಲಕ್ಶ್ಯವಂತೂ ಬೇಡವೇ ಬೇಡ, ಜಾಗೃತಿ ಅತ್ಯವಶ್ಯವಾಗಿ ಬೇಕು; ಈ ದಿಸೆಯಲ್ಲಿ ಇಂತಹ ಶಿಬಿರಗಳು ನೆರವಾಗಲಿವೆ” ಎಂದು ಹೇಳಿದರು.

ಮಹಿಳಾ ಸಬಲೀಕರಣ ಘಟಕ ‘ಮನಸ್ವಿ’ಯ ಅಧ್ಯಕ್ಷೆ  ಡಾ. ಶರಣಬಸಮ್ಮ ಮಾತನಾಡಿ “ಇಂದು ಮಹಿಳೆ ಮನೆ ಒಳಗೆ ಮತ್ತು ಹೊರಗೆ ಕೂಡ ದುಡಿಯುತ್ತಿದ್ದಾಳೆ. ಎರಡೂ ಕಡೆ ಒತ್ತಡ ನಿಭಾಯಿಸುವ ಭರದಲ್ಲಿ  ಮಹಿಳಾ ಸಮುದಾಯ ತನ್ನ ಆರೋಗ್ಯದ ಕಡೆ ಅಲಕ್ಷ್ಯ ವಹಿಸುವುದು ಸಾಮಾನ್ಯವಾಗಿದೆ. ಈ ದಿಸೆಯಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಇಂಥ ಕಾರ್ಯಕ್ರಮಗಳು ಅವಶ್ಯವಾಗಿದೆ” ಎಂದರು.

ಕ್ಯಾನ್ಸರ್ ಬಗೆಗೆ ಕಾರ್ಯಕ್ರಮದಲ್ಲಿ ವೈದ್ಯರೊಂದಿಗೆ ವಿದ್ಯಾರ್ಥಿನಿಯರು ಸಂವಾದದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ನಂತರ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು. ೫೦ ಕ್ಕೂ ಹೆಚ್ಚು ಮಹಿಳೆಯರು ಇದರ ಪ್ರಯೋಜನ ಪಡೆದು ಕೊಂಡರು.

ಪ್ರಾರ್ಥನೆಯನ್ನು ಕು ಸಂಗೀತಾ ಮಾಡಿದರು. ಡಾ. ಶರಣಬಸಮ್ಮ ಸ್ವಾಗತಿಸಿದರು. ಪ್ರೊ.ಪಾರ್ವತಿ ಕಡ್ಲಿ ವಂದನಾರ್ಪಣೆ ಮಾಡಿದರು. ಅಧ್ಯಾಪಕಿ ಇಂದಿರಾ ಕಾರ್ಯಕ್ರಮ ನಿರೂಪಣೆ ಮಾಡಿದರು.

Filed in: Activities, Events Tags: 

Get Updates

Share This Post

Related Posts

© 2023 PROUD TIMES : ಪ್ರೌಢ ವಿಜಯ. All rights reserved.