ದಿನಾಂಕ: ೨೮/೧೦/೨೦೨೧
ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಒಂದು ವಾರ ಆಯೋಜಿಸಿರುವ “ಕನ್ನಡಕ್ಕಾಗಿ ನಾವು” ಅಭಿಯಾನದ ಅಡಿಯಲ್ಲಿ ದಿನಾಂಕ ೨೮/೧೦/೨೦೨೧ ಗುರುವಾರ ಬೆಳಿಗ್ಗೆ ೧೧.೦೦ ಗಂಟೆಗೆ ಕನ್ನಡದ ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ರಾಷ್ಟçಕವಿ ಕುವೆಂಪುರವರ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’, ಬಾರಿಸು ಕನ್ನಡ ಡಿಂಡಿಮವಾ, ಕೆ.ಎಸ್. ನಿಸಾರ್ ಅಹಮದ್ರವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖರವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದªರು ಹಾಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಎಸ್.ಎಂ. ಶಶಿಧರ್ ಅವರು ಮಾತನಾಡಿ ಕನ್ನಡ ನಾಡು, ನುಡಿಯ ಮಹತ್ವವನ್ನು ತಿಳಿಸಿದರು ಹಾಗೂ ಕನ್ನಡವನ್ನು ದಿನನಿತ್ಯ ಬಳಸಿ, ಬೆಳೆಸಬೇಕು ಎಂದು ಸಂಕಲ್ಪವನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು.
ಈ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಬಸವರಾಜ ರೆಡ್ಡಿಹಳ್ಳಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ೩೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರೊ. ಮಧ್ವರಾಜ್ ವಂದನಾರ್ಪಣೆಯನ್ನು ನೆರವೇರಿಸಿದರು., ಪ್ರೊ. ಮಾಲತೇಶ್, ಪ್ರೊ. ರವಿಕುಮಾರ್ ಎಸ್.ಪಿ., ಪ್ರೊ. ವಸಂತಮ್ಮ ಜಿ., ಪ್ರೊ. ಸಿದ್ಧಲಿಂಗೇಶ್ವರ್ ಕಟ್ಟೆಗೌಡ್ರು ಮತ್ತು ಪ್ರೊ. ನವೀನ್ ಮುಂತಾದವರು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.