0

ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪಲ್ಲೇದ ದೊಡ್ಡಪ್ಪ

ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ಇಂದು 8.07.2021 ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ (ಪಿಡಿಐಟಿ) ಹೊಸಪೇಟೆಯಲ್ಲಿ ಜರುಗಿದ ಪದವಿ ಗ್ರಹಣ ಕಾರ್ಯಕ್ರಮದಲ್ಲಿ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪಲ್ಲೇದ ದೊಡ್ಡಪ್ಪ ರವರು ಅಧಿಕಾರ ಸ್ವೀಕರಿಸಿದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೋರಿ ವಿರುಪಾಕ್ಷಪ್ಪ, ಶರಣ ಸ್ವಾಮಿ, ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮೂಲಾಲಿ, ಕೋರಿಶೆಟ್ರ ಲಿಂಗಪ್ಪ, ಸಾಲಿ ಸಿದ್ದಯ್ಯಸ್ವಾಮಿ ಹಾಗೂ ಪ್ರಾಚಾರ್ಯರು ಡಾ. ಎಸ್.ಎಂ. ಶಶಿಧರ ಹಾಗೂ ಸಿಬ್ಬಂದಿ ವರ್ಗ ಒಳಗೊಂಡ ಈ ಕಾರ್ಯಕ್ರಮವನ್ನು ಡಾ.ಶರಣಬಸಮ್ಮ ನಿರೂಪಿಸಿದರು. ರವಿ ಕುಮಾರ್ ವಂದನಾರ್ಪಣೆ ಮಾಡಿದರು. ಹೊಸಪೆಟೆ ನಗರದ ಸಂಘ ಸಂಸ್ಥೆಗಳ ಮುಖಂಡರು, ವೀರಶೈವ ಲಿಂಗಾಯತ ನಾಯಕರು ದೊಡ್ಡಪ್ಪ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು.

 

 

Filed in: Sports Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.