0

‘ಶಿಕ್ಷಣದಿಂದ ಸುಸ್ಥಿರ ಬೆಳವಣಿಗೆ’ -ಎಂ.ತ್ರಿನಾದ್, ಜೆ.ಎಸ್.ಡಬ್ಲೂ. ಕಂಪೆನಿಯ ಸಹಉಪಾಧ್ಯಕ್ಷ (ಮಾನವ ಸಂಪನ್ಮೂಲ)

 Jan 20, 2021: ಶಿಕ್ಷಣದಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ. ಹಾಗೆಯೇ, ಉದ್ಯಮಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಶಿಕ್ಷಣದ ಹಂತದಲ್ಲೇ ಸಜ್ಜು ಮಾಡಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮದ ನಡುವೆ ಹೆಚ್ಚಿನ ಸಹಭಾಗಿತ್ವ ಬೆಳೆಯಲೇಬೇಕು. ಎಂದು ಶ್ರೀ ಎಂ.ತ್ರಿನಾದ್, ಜೆ.ಎಸ್.ಡಬ್ಲೂ. ಕಂಪೆನಿಯ  ಸಹಉಪಾಧ್ಯಕ್ಷ (ಮಾನವ ಸಂಪನ್ಮೂಲ) (Associate Vice President of Human Resource dept)  ಅವರು ತಿಳಿಸಿದರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ 20-01-2021 ಬುಧವಾರದಂದು ನಡೆದ ಪ್ರಥಮ ವರ್ಷದ , ಎಂಬಿಎ ೧೦ನೇ ವರ್ಷದ (2020-22) ನೂತನ ಬ್ಯಾಚ್  ಪ್ರಾರಂಭೋತ್ಸವ ‘ಶುಭಾಕಾಂಕ್ಷ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
          ಎಂಬಿಏ ವಿದ್ಯಾರ್ಥಿಗಳಿಗೆ ಉದ್ಯಮ ಕ್ಷೇತ್ರದಲ್ಲಿನ  ಕೌಶಲ್ಯ ಅತ್ಯಗತ್ಯ, ಈ ನಿಟ್ಟಿನಲ್ಲಿ  ಉದ್ಯಮ ಹಾಗೂ ಶೈಕ್ಷಣಿಕ ಅಂತರವನ್ನು ಪೂರೈಸಲು ದೀರ್ಘಕಾಲಿಕ ಸಹಭಾಗಿತ್ವ ವಿದ್ಯಾರ್ಥಿಗಳ ಕೌಶಲ್ಯದ ಅಭಿವೃದ್ಧಿಗೆ ಮುಖ್ಯಪಾತ್ರವನ್ನು ವಹಿಸುತ್ತದೆ. ಇದರ ಅಡಿಯಲ್ಲಿ ನಿರಂತರ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಸೂಕ್ತ ವಿದ್ಯಾರ್ಥಿಗಳನ್ನು ಉದ್ಯೋಗ ಸಂದರ್ಶನದ ಆಯ್ಕೆ ಮಾಡುವಲ್ಲಿ  ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ ಜೀವನದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡು  ಒತ್ತಡಗಳನ್ನು ನಿಭಾಯಿಸಿದಲ್ಲಿ ಮನುಷ್ಯ ಯಶಸ್ಸುಗಳಿಸುತ್ತಾನೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಅವರ ಹಲವಾರು ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು.
          ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಿ.ಡಿ.ಐ.ಟಿ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಜಾನೇಕುಂಟೆ ಬಸವರಾಜ್ ಇವರು ಮಾತನಾಡಿ ಪೋಷಕರ ಆಸೆಯನ್ನು ಈಡೇರಿಸುವಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಬೇಕೆಂದು ಹೇಳಿದರು.
          ಪ್ರಾಚಾರ್ಯರಾದ ಡಾ. ಎಸ್.ಎಂ. ಶಶಿಧರ್ ಅವರು ಮಾತನಾಡಿ  “ಆರ್ಥಿಕ ಕುಸಿತದ ಯುಗದಲ್ಲಿ, ಉದ್ಯಮಗಳನ್ನು ಲಾಭದಾಯಕವಾಗಿ ಮುನ್ನಡೆಸಲು ವ್ಯವಸ್ಥಾಪಕ ಕೌಶಲ್ಯಗಳು ಮುಖ್ಯವಾಗುತ್ತವೆ. ವ್ಯವಸ್ಥಾಪಕರು ಜಾಗತೀಕರಣದ ಪ್ರಸಕ್ತ ಸನ್ನಿವೇಶ ಮತ್ತು ಸ್ಥಳೀಯ ಪರಿಸರದ ಗ್ರಹಿಕೆ ಹೊಂದಿರಬೇಕು” ಎಂದು ಅಭಿಪ್ರಾಯ ಪಟ್ಟರು.
          ಈ ಸಮಾರಂಭದಲ್ಲಿ ಎಂ ಬಿ ಎ ವಿಭಾಗದ ಮುಖ್ಯಸ್ಥರಾದ ಪ್ರೊ.ರವಿಕುಮಾರ್ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಅಧ್ಯಕ್ಷರಾದ  ಶ್ರೀ ಜಾನೇಕುಂಟೆ ಬಸವರಾಜ್ ಶ್ರೀ ಎಂ.ತ್ರಿನಾದ್, ಅವರನ್ನು ಗೌರವಿಸಿದರು.
          ಕು. ಐಶ್ವರ್ಯ ಸ್ವಾಗತ ಭಾಷಣ ಮಾಡಿದರು. ಕು. ಮಮ್ತಾಜ್ ನಿರೂಪಿಸಿದರು,  ಕು. ಕಾವ್ಯ ಪ್ರಾರ್ಥಿಸಿದರು. ಕು. ಗೌರಿಪ್ರಿಯಾ ವಂದಿಸಿದರು. ಈ ಕಾರ್ಯಕ್ರಮದಲ್ಲಿ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪಾಲ್ಗೊಂಡಿದ್ದರು.
   
Filed in: Activities, Events, MBA Tags: 

Get Updates

Share This Post

Related Posts

© 1785 PROUD TIMES : ಪ್ರೌಢ ವಿಜಯ. All rights reserved.