0

ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ -ಉಡೇದ ಬಸವರಾಜ

 ಹೊಸಪೇಟೆ , ೯ ಜನವರಿ ೨೦೨೧ ;
ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ  ಸಾಮರ್ಥ್ಯದ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಉಡೇದ ಬಸವರಾಜ ಅವರು ಅಭಿಪ್ರಾಯ ಪಟ್ಟರು .

ಅವರು ಹೊಸಪೇಟೆ ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ, ನೂತನವಾಗಿ ನಿರ್ಮಿಸಲಾದ ಬಾಸ್ಕೆಟ್ ಬಾಲ್ ಕ್ರೀಡಾಂಗಣದ ಉದ್ಘಾಟನೆಯನ್ನು ೦೯/೦೧/೨೦೨೧ ಶನಿವಾರ ನೆರವೇರಿಸಿ ಮಾತನಾಡುತಿದ್ದರು.
ಆಟದ ಬಯಲು ಒಂದು ವಿಶಾಲವಾದ ಶಾಲೆಯಿದ್ದಂತೆ. ಅದು ನಮಗೆ ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ. ಸ್ನೇಹಪರ ಭಾವನೆ, ಸ್ಪರ್ಧಾತ್ಮಕ ಭಾವನೆ ಹಾಗೂ ಸಹಕಾರ ಮನೋಭಾವವನ್ನು ಅದು ಕಲಿಸಿಕೊಡುತ್ತದೆ. ಶಾರೀರಿಕ ಸಂಪತ್ತು ಬೌದ್ಧಿಕ ವಿಕಸನದ ಅಡಿಪಾಯವಾಗಿದೆ. ತಾಂತ್ರಿಕ ವಿದ್ಯಾರ್ಥಿಗಳು ಇಂಥ ಕ್ರೀಡಾ ಸೌಕರ್ಯಗಳ ಲಾಭ ಪಡೆದು ರಾಷ್ಟೀಯ ಅಂತಾರಾಷ್ಟ್ರೀಯ ಮನ್ನಣೆ ಪಡೆಯಬೇಕು. ಆಗ ಇಂಥ ಕ್ರೀಡಾಂಗಣಗಳ ನಿಜವಾದ ಸದುಪಯೋಗ ಆದಂತೆ ಎಂದು ಅಭಿಪ್ರಾಯಪಟ್ಟರು.
ವೀರಶೈವ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಕೋಳೂರು ಮಲ್ಲಿಕಾರ್ಜುನಗೌಡ ಅವರು  ಮಾತನಾಡಿ, ವೀ.ವಿ ಸಂಘವು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದೆ. ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾ ಮೂಲ ಸೌಕರ್ಯ ಕಲ್ಪಿಸಲು ಪ್ರಾಧಾನ್ಯತೆ ನೀಡಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಪಿ.ಡಿ.ಐ.ಟಿ .ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಾನೆಕುಂಟೆ ಬಸವರಾಜ್ ಅವರು ಮಾತನಾಡಿ, ಪ್ರಸ್ತುತ ಈ ಕ್ರೀಡಾಂಗಣ ಕೇವಲ ಕಾಲೇಜು ಮಟ್ಟಕ್ಕೆ ಮಾತ್ರ ಸೀಮಿತವಲ್ಲ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಗಳನ್ನು ಆಯೋಜಿಸುವ ಉದ್ದೇಶ ತಮ್ಮ ಸಂಸ್ಥೆಗೆ ಇದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ.ಶಶಿಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ’ನಾವು ವಯಸ್ಸಾದಂತೆ ಆಟವಾಡುವುದನ್ನು ನಿಲ್ಲಿಸುವುದಿಲ್ಲ; ನಾವು ಆಟವಾಡುವುದನ್ನು ನಿಲ್ಲಿಸುವುದರಿಂದ ನಮಗೆ ವಯಸ್ಸಾಗುತ್ತದೆ ಎಂಬ ಜಾರ್ಜ್ ಬರ್ನಾರ್ಡ್ ಷಾ ಅವರ ಮಾತನ್ನು ನೆನೆಪಿಸಿದರು. ಇಂದಿನ ವಿದ್ಯಾರ್ಥಿಗಳು ಮೊಬೈಲ್, ಕಂಪ್ಯೂಟರ್, ಅಂತರ್ಜಾಲದಲ್ಲಿ ಆಟವಾಡುತ್ತಾರೆ. ಆದರೆ ದೇಹವನ್ನ್ಕು ದಂಡಿಸುವ, ವ್ಯಾಯಾಮ ಆಗುವ ಯಾವುದೇ ಕ್ರೀಡೆಯನ್ನು ಆಡುವುದಿಲ. ಆದರಿಂದ ಇಂದಿನ ಮಕ್ಕಳು ಶಾರೀರಿಕವಾಗಿ ಸದೃಢವಾಗಿರುವುದಿಲ್ಲ. ಇಂತಹ ಕ್ರೀಡಾ ಚಟುವಟಿಕೆಗಳ ಮೂಲಕ ಅವರನ್ನು ಆಟದ ಮೈದಾನಕ್ಕೆ ಬರಲು ಪ್ರೇರೇಪಿಸಬೇಕು ಎಂದರು.
ಸಮಾರಂಭದಲ್ಲಿ, ಪಿಡಿಐಟಿ ಆಡಳಿತ ಮಂಡಳಿಯ ಸದಸ್ಯರುಗಳಾದ ಏಕಾಮರೇಶ ತಾಂಡೂರ , ವೀ.ವಿ. ಸಂಘದ ಆಜೀವ ಸದಸ್ಯರುಗಳು, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿ ಸಮುದಾಯ ಹಾಗು ನಗರದ ಗಣ್ಯ ನಾಗರಿಕರು ಉಪಸ್ಥಿತರಿದ್ದರು.
ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಪ್ರೊ. ರವಿಕುಮಾರ್ ಸ್ವಾಗತಿಸಿದರು. ಏಳನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ  ಕುಮಾರಿ ಮೇಘನಾ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ.ಎಸ್. ಮಂಜುನಾಥ ಕಾರ್ಯಕ್ರಮದ ನಿರೂಪಣೆ ಮಾಡಿದರು. ಎಲೆಕ್ಟ್ರಿಕಲ್ ವಿಭಾಗದ ಪ್ರಾಧ್ಯಾಪಕ ಪ್ರೊ. ಮಧ್ವರಾಜ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ಬಳ್ಳಾರಿ ಜಿಲ್ಲೆಯ ಆಹ್ವಾನಿತ ಬಾಸ್ಕೆಟ್ ಬಾಲ್ ಆಟಗಾರರ ತಂಡಗಳ ಮಧ್ಯೆ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು

   

Filed in: Sports Tags: 

Get Updates

Share This Post

Related Posts

© 3272 PROUD TIMES : ಪ್ರೌಢ ವಿಜಯ. All rights reserved.