0

ವಿಟಿಯು ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ: ಪಿಡಿಐಟಿಗೆ ದ್ವಿತೀಯ ಸ್ಥಾನ

ಹೊಸಪೇಟೆ ೭ ಮಾರ್ಚ್ ೨೦೨೦
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ ವಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾವಳಿಗಳು ಬೀದರ್ ನ ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ ೫ ಮತ್ತು ೬ರಂದು ಜರುಗಿದವು. ಪಂದ್ಯಾವಳಿಯಲ್ಲಿ ಒಟ್ಟು ೧೨ ಇಂಜಿನಿಯರಿಂಗ್ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.

ಅಂತಿಮ ಸುತ್ತಿನ ಪಂದ್ಯದಲ್ಲಿ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ತಂಡಗಳು ಮುಖಾಮುಖಿಯಾಗಿ ಸೆಣಸಿದವು. ಪಿಡಿಐಟಿ ತಂಡ ೨೫-೧೭, ೨೪-೨೫ ಮತ್ತು ೧೪-೧೫ ಅಂಕಗಳಿಂದ ದ್ವಿತೀಯ ಸ್ಥಾನ ಗಳಿಸಿತು. ಬಿಇಸಿ ತಂಡ ಪ್ರಥಮ ಸ್ಥಾನ ಪಡೆಯಿತು. ಇದಕ್ಕೂ ಮುನ್ನ ಜರುಗಿದ ಸೆಮಿ ಫ಼ೈನಲ್ ಪಂದ್ಯದಲ್ಲಿ ಪಿಡಿಐಟಿ ತಂಡವು ಅತಿಥೇಯ ಜಿಎನ್ ಡಿ ಇಂಜಿನಿಯರಿಂಗ್ ಕಾಲೇಜಿನ ತಂಡವನ್ನು ಸೋಲಿಸಿ ಫ಼ೈನಲ್ಸ್ ಪ್ರವೇಶಿಸಿತ್ತು.

ಈ ಮೂಲಕ ಬಿಇಸಿ ಮತ್ತು ಪಿಡಿಐಟಿ ತಂಡಗಳು ಧಾರವಾಡದ ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ ೧೦ರಿಂದ ೧೨ರವರೆಗೆ ನಡೆಯಲಿರುವ ವಿಟಿಯು ಅಂತರ್ವಲಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆಯಾಗಿವೆ.

Filed in: Sports Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.