0

ಇಂಧನ ಸಂರಕ್ಷಣೆ ಜೀವನಶೈಲಿಯಾಗಲಿ” -ಈ. ಪ್ರಹ್ಲಾದ್

  ಇಂಧನ ಸಂರಕ್ಷಣೆ ಮತ್ತು ವಿದ್ಯುತ್ ಉಳಿತಾಯವನ್ನು ತಮ್ಮ ಜೀವನಶೈಲಿಯ ಒಂದು ಭಾಗವಾಗಿ ಮಾಡಿಕೊಳ್ಳಬೇಕು ಎಂದು ಕೆ.ಪಿ.ಟಿ.ಸಿ.ಎಲ್. ನ ಸುಪರಿಂಟೆಂಡೆಂಟ್ ಇಂಜಿನಿಯರ್  ಈ. ಪ್ರಹ್ಲಾದ್ ಅಭಿಪ್ರಾಯಪಟ್ಟರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ  ಸಂಯುಕ್ತವಾಗಿ ಆಯೋಜಿಸಿದ್ದ  ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ ಕಾರ್ಯಕ್ರಮ ಹಾಗೂ ರ್‍ಯಾಲಿಯನ್ನು (Energy Conservation Awareness Rally) ದಿನಾಂಕ: ೨೮/೧೨/೨೦೧೯ ಶನಿವಾರದಂದು ಚಾಲನೆ ನೀಡುವ ಮೂಲಕ ಮಾತನಾಡಿದರು.
ಕರ್ನಾಟಕದ ವಿವಿಧ ಕಡೆಗಳಲ್ಲಿ ಸೋಲಾರ್ ಪಾರ್ಕ್ ಗಳ ಸ್ಥಾಪನೆಯಾಗಿದೆ. ಕೊಪ್ಪಳದಲ್ಲಿ  ಬೃಹತ್ ಸೌರಶಕ್ತಿ ವಿದ್ಯುದಾಗಾರ ಸ್ಥಾಪನೆಗೆ ಯೋಜನೆ ಸಿದ್ಧವಗಿದೆ. ಇವು ನೈಸರ್ಗಿಕ ಶಕ್ತಿ ಸಂಪನ್ಮೂಲ ಬಳಸಿ ವಿದ್ಯುತ್ ತಯಾರಿಸುವುದರಿಂದ ಮುಂದಿನ ಪೀಳಿಗೆಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳನ್ನು ಸಂರಕ್ಷಿಸಬಹುದು ಎಂದು ಹೇಳಿದರು.
ಪ್ರಾಂಶುಪಾಲರಾದ  ಡಾ. ಎಸ್.ಎಂ. ಶಶಿಧರ್ ಮಾತನಾಡಿ ಅನವಶ್ಯಕ ವಿದ್ಯುತ್ ಬಳಕೆ, ವಿದ್ಯುತ್ ಅಪವ್ಯಯದಿಂದ ಅಪಾರವಾದ ಇಂಧನವು ಹಾಗು ಪರಿಸರ ನಾಶವಾಗುತ್ತಿದೆ. ಇದನ್ನು ತಡೆಗಟ್ಟಲು ವಿದ್ಯಾರ್ಥಿಗಳು  ಸಾರ್ವಜನಿಕರಲ್ಲಿ ಇಂಧನ ಸಂರಕ್ಷಣಾ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷರಾದ ಜಾನೇಕುಂಟೆ ಬಸವರಾಜ್ ಅವರು ಮಾತನಾಡಿ ಇಂತಹ ಕಾರ್ಯಕ್ರಮಗಳು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಜನಜಾಗೃತಿ ಮೂಡಿಸುವಲ್ಲಿ ಸಹಾಯವಾಗಲಿದೆ ಎಂದರು.
ಕೆ.ಆರ್.ಇ.ಡಿ.ಎಲ್. ನ ಧ್ಯೇಂi, ಉದ್ದೇಶಗಳು, ಜಾಗೃತಿ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ  ವಿದ್ಯುತ್ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೊ .ಮಧ್ವರಾಜ ವಿವರಿಸಿದರು. ಆಡಳಿತ ಮಂಡಳಿಯ ಸದಸ್ಯರುಗಳಾದ ಏಕಾಮರೇಶ ತಾಂಡೂರ ಮತ್ತು ವಿದ್ಯುತ್ ಹಾಗು ವಿದ್ಯುನ್ಮಾನ ವಿಭಾಗದ  ಮುಖ್ಯಸ್ಥರಾದ ಡಾ.ಪ್ರದೀಪ್ ಬಿ ಜ್ಯೋತಿ, ಡೀನ್ ಶಿವಕೇಶವ ಕುಮಾರ್ ಉಪಸ್ಥಿತರಿದ್ದರು ಪ್ರೊ. ರವಿಕುಮಾರ್, ಎಸ್. ಪಿ. ನಿರೂಪಿಸಿದರು. ಕು. ಮಹಿಮಾ ಪ್ರಾರ್ಥಿಸಿದರು. ಪ್ರೊ. ಮಹೇಶ್ ಓಬಣ್ಣನವರ್ ವಂದಿಸಿದರು.
ನಂತರ ಹೊಸಪೇಟೆ ನಗರದ ವಿವಿಧ ಭಾಗಗಳಲ್ಲಿ ಜಾಗೃತಿ ರ್‍ಯಾಲಿ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಿಂದ ನಡೆದು ವಿಜಯನಗರ ಕಾಲೇಜು, ಅಂಬೇಡ್ಕರ್ ವೃತ್ತ ಮುಖಾಂತರ  ಶಾನಭಾಗ್ ವೃತ್ತದಲ್ಲಿ ಕೊನೆಗೊಂಡಿತು.  ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡರು.

Filed in: Activities, E E E, Events Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.