0

ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ವಿರುದ್ಧ ಪಿಡಿಐಟಿ ವಿದ್ಯಾರ್ಥಿಗಳ ಪ್ರತಿಭಟನೆ; ಧ್ವನಿ ಗೂಡಿಸಿದ ಚಲನಚಿತ್ರ ತಾರೆ ತಾರ ಅನುರಾಧ

ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಹೈದರಾಬಾದಿನ ಪಶುವೈದ್ಯ ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಘಟನೆ ಯಿಂದ ಸಮಾಜದ ದಿಗ್ಭ್ರಮೆಗೊಂಡು ಇದೆ ಅಪರಾಧಿಗಳಿಗೆ ಭಾರತದ ಕಾನೂನಿನ ಅನ್ವಯ ಶಿಕ್ಷೆ ವಿಧಿಸಬೇಕು” ಎಂದು ಹೊಸಪೇಟೆ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಎಸ್ ಎಮ್ ಶಶಿಧರ್ ಅವರು ಆಗ್ರಹಿಸಿದರು.
ಅವರು ಪ್ರಿಯಾಂಕಾ ರೆಡ್ಡಿ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಘಟನೆಯ ವಿರುದ್ಧ ಪ್ರತಿಭಟಿಸಿ ಪಿಡಿಐಟಿ ವಿದ್ಯಾರ್ಥಿಗಳು ಕಾಲೇಜಿನಿಂದ ತಾಲೂಕು ಕಚೇರಿಯ ವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಜಾಥಾ ಉದ್ದೇಶಿಸಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಕನ್ನಡದ ಖ್ಯಾತ ಚಲನಚಿತ್ರ ನಟಿ ತಾರಾ ಅನುರಾಧ ಅವರು  ಜಾಥಾ ಜೊತೆಗೂಡಿ ಮಾತನಾಡಿದರು. “ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲ; ಸಾಮಾಜಿಕ ಜವಾಬ್ದಾರಿಯುಳ್ಳ ಎಲ್ಲರೂ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಭಾರತದ ಸಂಸ್ಕೃತಿಗೆ ಕಳಂಕ ಪ್ರಾಯವಾದ ಇಂಥ ಘಟನೆಗಳು ಕಳವಳ ಹುಟ್ಟಿಸುತ್ತಿವೆ. ಪ್ರಿಯಾಂಕಾ ರೆಡ್ಡಿಯವರಿಗೆ ಒದಗಿದ ದುಸ್ಥಿತಿ ಬೇರೆ ಯಾವ ಹೆಣ್ಣಿಗೂ ಬರಬಾರದು. ಇಂಥ ಕೃತ್ಯ ಎಸಗುವ ಅಪರಾಧಿಗಳಿಗೆ ನಿರ್ಧಾಕ್ಷಿಣ್ಯವಾಗಿ ಶಿಕ್ಷೆ ವಿಧಿಸಬೇಕು” ಎಂದು ಅವರು ಖಂಡಿಸಿದರು.
ಘಟನೆಯನ್ನು ಖಂಡಿಸಿ ಸೂಕ್ತ ಕ್ರಮಕ್ಕೆ ಸರ್ಕಾರವನ್ನು ಆಗ್ರಹಿಸಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಹಿ ಮಾಡಿದ, ಮನವಿ ಪತ್ರವನ್ನು  ತಹಶೀಲ್ದಾರರಿಗೆ ಸಲ್ಲಿಸಲಾಯಿತು. ತಹಶೀಲ್ದಾರ್ ಡಿ.ಜೆ. ಹೆಗಡೆಯವರು ಸ್ವೀಕರಿಸಿ ಮನವಿಯನ್ನು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರಾದ ಪ್ರೊ.ರವಿಕುಮಾರ್, ಪ್ರೊ.ಪಾರ್ವತಿ ಕಡ್ಲಿ, ಶಹಿದ ಬಾನು, ಸಿದ್ದಲಿಂಗೇಶ್ವರ, ಉದಯಶಂಕರ್, ಬಿಎಸ್ ಜೀವಿತ, ನವೀನ್ ಹಾಗೂ ವಿದ್ಯಾರ್ಥಿ ಮುಖಂಡರಾದ ಮಂಜಿರ ರೆಡ್ಡಿ, ವಿಕ್ರಂ, ಮಮ್ತಾಜ್, ನಾಸಿರ್ ಹುಸೇನ್, ತುಳಸಿ ಹಾಗೂ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

  

Filed in: Activities, Events Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.