0

ಐತಿಹಾಸಿಕ ಸಾಕ್ಷಚಿತ್ರಗಳು ಮುಂದಿನ ಪೀಳಿಗೆಯ ಸಾಂಸ್ಕçತಿಕ ಬುನಾದಿಗಳು – ಸಿ.ಟಿ.ರವಿ

ಹೊಸಪೇಟೆ, ನವಂಬರ್ 6ನೇ 2019;
“ನಮ್ಮ ಸಂಸ್ಕತಿ, ನಾಗರೀಕತೆ ಅಡಗಿರುವುದು ಇತಿಹಾಸದ ಕುರುಹುಗಳನ್ನು ಸಂರಕ್ಷಿಸಿದಾಗ ಮಾತ್ರ” ಎಂದು ಕನ್ನಡ ಮತ್ತು ಸಂಸ್ಕತಿ ಸಚಿವ ಸಿ.ಟಿ.ರವಿ ಇಂದು ಇಲ್ಲಿ ಅಭಿಪ್ರಾಯ ಪಟ್ಟರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅನ್ನಪೂರ್ಣ ಕ್ರಿಯೇಷನ್ಸ್, ಸಿರಿಗೇರಿ ಸಂಸ್ಥೆಯು ಹಮ್ಮಿಕೊಂಡಿದ್ದ “ಬಳ್ಳಾರಿ ಕೋಟೆ” ಸಾಕ್ಷ÷್ಯಚಿತ್ರ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತಾನಾಡುತ್ತಿದ್ದರು. 

ಮಹಾತ್ಮಾ ಗಾಂಧೀಜಿಯವರ ೧೫೦ನೇ ಜನ್ಮ ದಿನದ ಸಂದರ್ಭದಲ್ಲಿ ಗಾಂyಧೀಜಿಯವರ ಹಾಗೂ ಬಸಣ್ಣನವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳದೇ ಕೇವಲ ಅವರನ್ನು ಆರಾಧಿಸುವ ಮೂಲಕ ಸಾಂಸ್ಕತಿಕ ಜವಾಬ್ದಾರಿಯಿಂದ ವಿಮುಖರಾಗಿದ್ದೇವೆ. ಆದರೆ ಗಾಂಧೀಜಿ ಮತ್ತು ಬಸವಣ್ಣನವರ ಸಮಾಜ ಮುಖಿ ಕಾರ್ಯಗಳಿಂದ ವಿಮುಕ್ತರಾಗಿ ನಾವು ಅವರನ್ನು ಕೇವಲ ದೈವಿ ಸ್ವರೂಪದಲ್ಲಿ ಆರಾಧಿಸುತ್ತಿರುವುದು ದುರದೃಷ್ಟಕರ ಎಂದು ವಿಶ್ಲೇಶಿಸಿದರು.

ನಮ್ಮ ಭಾರತದ ಸಂಸ್ಕತಿ ಮೃತ್ಯುಂಜಯ ಸಂಸ್ಕತಿ. ಅದಕ್ಕೆ ಸಾವಿಲ್ಲ, ಅದು ನಿರಂತರ ಎಂದು ಪ್ರತಿಪಾದಿಸಿದರು. ರಾಜ್ಯಾದ್ಯಂತ ಜನವರಿ ತಿಂಗಳಿನಲ್ಲಿ ಸಾಕ್ಷ÷್ಯಚಿತ್ರ, ದೃಶ್ಯ ಕಲೆಗೆ ಸಂಬAಧಪಟ್ಟAತೆ ಸ್ಪರ್ಧೆ ಏರ್ಪಡಿಸುವ ಇರಾದೆ ಪ್ರವಾಸೋದ್ಯಮ ಇಲಾಖೆಗೆ ಇದೆ. ರಾಜ್ಯಾದ್ಯಂತ ಇರುವ ಎಲ್ಲಾ ಸಾಂಸ್ಕತಿಕ ಹಾಗೂ ಐತಿಹಾಸಿಕ ಕೇಂದ್ರಗಳನ್ನು ದೃಶ್ಯ ಮಾಧ್ಯದಲ್ಲಿ ಸೆರೆಹಿಡಿದು ಚಿತ್ರಿಕರಿಸುವ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಜಾನೆಕುಂಟೆ ಬಸವರಾಜ್ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ್, ಪ್ರಾಂಶುಪಾಲರಾದ ಡಾ.ಎಸ್.ಎಂ.ಶಶಿಧರ್, ಕಲಾ ನಿರ್ದೇಶಕರಾದ ಶ್ರೀ ಮಂಜುನಾಥ ಗೋವಿಂದವಾಡ ಹಾಗೂ ಸಾಕ್ಷ÷್ಯಚಿತ್ರ ನಿರ್ಮಾಪಕ-ನಿರ್ದೇಶಕರಾದ ಸಿರಿಗೇರಿ ಯರಿಸ್ವಾಮಿ ಉಪಸ್ಥಿತರಿದ್ದರು.


ಕು.ಪ್ರಿಯಾಂಕ ಪ್ರಾರ್ಥಿಸಿದರು, ಕಾರ್ಯಕ್ರಮದಲ್ಲಿ ಕು.ಭೂಮಿಕ ಹಾಗೂ ಕು.ನಮ್ರತ  ಸಂಗೀತ ಹಾಗೂ ನೃತ್ಯರೂಪಕ ಪ್ರದರ್ಶನದಿಂದ ಪ್ರೇಕ್ಷಕರ ಮನಸೆಳೆದರು. ಕಾರ್ಯಕ್ರಮದಲ್ಲಿ ೨೦೦ಕ್ಕೆ ಹೆಚ್ಚು ಪ್ರೇಕ್ಷಕರು ಭಾಗವಹಿಸಿದ್ದರು.

Filed in: Events Tags: 

Get Updates

Share This Post

Related Posts

© 2021 PROUD TIMES : ಪ್ರೌಢ ವಿಜಯ. All rights reserved.