ಪಿಡಿಐಟಿಯ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಹಾಗೂ ಲೀಡ್ ಘಟಕಗಳ ವಿದ್ಯಾರ್ಥಿಗಳು ಒಂದು ಲಕ್ಷ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಬಟ್ಟೆ, ಧಾನ್ಯ, ಪಾತ್ರೆ, ಬೆಡ್‌ಶೀಟ್, ಸೋಪ್, ವಾಷಿಂಗ್ ಪೌಡರ್, ಬ್ರಷ್, ಬಿಸ್ಕೇಟ್, ಕೊಬ್ಬರಿಎಣ್ಣೆ, ಟವೆಲ್, ಚಾಪೆ, ಆಹಾರ, ಮೇವು, ಔಷಧಿ ಇತರ ಜೀವನಾವಶ್ಯಕ ಸಾಮಾಗ್ರಿಗಳನ್ನು ಸಂಗ್ರಹಿಸಿ ನೆರೆಪೀಡಿತ ಬಾಗಲಕೋಟೆ ಜಿಲ್ಲೆಯ ಮುಧೋಳ (ತಾ) ಚಿಕ್ಕೂರು, ತಿಮ್ಮಾಪುರ, ಮುದ್ದಾಪುರ ಮುಂತಾದ ಗ್ರಾಮಗಳ ಸಂತ್ರಸ್ತರಿಗೆ ನೇರವಾಗಿ ಹೋಗಿ ವಿತರಣೆ ಮಾಡಿದರು.
ಸಾಮಾಗ್ರಿಗಳನ್ನು ತುಂಬಿದ ವಾಹನವನ್ನು ಬೀಳ್ಕೊಡುವಾಗ ಪ್ರಾಚಾರ್ಯರಾದ ಡಾ. ಎಸ್.ಎಂ. ಶಶಿಧರ್ ಅವರು ಮಾತನಾಡಿ ”ನೆರೆ ಸಂತ್ರಸ್ತರಿಗೆ ಸಾಂತ್ವನಕ್ಕಿಂತ ಸಹಾಯ ನೀಡುವುದು ಮುಖ್ಯ; ವಿದ್ಯಾರ್ಥಿಗಳು ಬೀದಿಗಳಲ್ಲಿ ತಿರುಗಿ ದೇಣಿಗೆ ಸಂಗ್ರಹಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಹೊಸಪೇಟೆ ನಗರದ ನಾಗರಿಕರು ಉದಾರ ದೇಣಿಗೆ ನೀಡಿದ್ದಾರೆ “ಎಂದರು. ಎನ್.ಎಸ್.ಎಸ್. ಯೋಜನಾಧಿಕಾರಿ ಚಂದ್ರಕುಮಾರ್ ಚಕ್ರಸಾಲಿ ಹಾಗೂ ಲೀಡ್ ಘಟಕದ ಸಂಯೋಜಕ ಅರ. ನವೀನ್ ಮತ್ತು ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪಿಡಿಐಟಿ ನೆರವು ಸಾಂತ್ವನಕ್ಕಿಂತ ಸಹಾಯ ನೀಡುವುದು ಮುಖ್ಯ
Filed in: Activities, NSS