
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸೌಮ್ಯಪ್ರಿಯ ಜಿಎಂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮೂರನೇ ರ್ಯಾಂಕ್ ಗಳಿಸಿದ್ದಾರೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿ ೨೦೧೮ರ ಜೂನ್ ತಿಂಗಳಲ್ಲಿ ನಡೆದ ಪರೀಕ್ಷೆಗಳಲ್ಲಿ ೮೬.೮೭% ಗಳಿಸಿದ್ದಾರೆ. ಸೌಮ್ಯ ಪ್ರಿಯ ಅವರ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ್, ಆಡಳಿತ ಮಂಡಳಿ ಸದಸ್ಯರಾದ ಏಕಾಮರೇಶ್ ತಾಂಡೂರು, ಜೆ.ಎಸ್. ಸತೀಶ್, ಪ್ರಾಂಶುಪಾಲರಾದ ಡಾ. ಎಸ್ ಎಂ ಶಶಿಧರ್ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಯು.ಎಂ. ರೋಹಿತ್ ಅಭಿನಂದಿಸಿದ್ದಾರೆ.
ಹೊಸಪೇಟೆಯ ಸದಾನಂದ ಜಿ ಎಂ. ಹಾಗೂ ರಾಜೇಶ್ವರಿ ಎಂ ಅವರ ದ್ವಿತೀಯ ಪುತ್ರಿ ಸೌಮ್ಯ ಪ್ರಿಯಾ ಜಿ ಎಂ ತಮ್ಮ ಈ ಸಾಧನೆಗೆ ತಮ್ಮ ಪೋಷಕರು ಕಾಲೇಜಿನ ಅಧ್ಯಾಪಕರ ಪ್ರೋತ್ಸಾಹವೇ ಕಾರಣ ಎಂದು ಹೇಳಿದ್ದಾರೆ.. ಸೌಮ್ಯ ಪ್ರಿಯ ಈಗ ಬೆಂಗಳೂರಿನ ಇನ್‌ಫ಼ೋಸಿಸ್ ನಲ್ಲಿ ಸಾಫ್ಟ್ ವೇರ್ ಇಂಜನೀಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.