
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಕೋಶ ‘ಮನಸ್ವಿ’ ವತಿಯಿಂದ ದಿನಾಂಕ ೧೫ ಮಾರ್ಚ್ ೨೦೧೯ ಶುಕ್ರವಾರದಂದು ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ಯದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸ್ತ್ರೀ ಸಂತೃಪ್ತಳಾಗಿ ಇರುವಲ್ಲಿ ಭಗವಂತ ಇರುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಸ್ತ್ರೀಯ ಸ್ಥಿತಿಗತಿಗಳನ್ನು ಉತ್ತಮ ಪಡಿಸುವಲ್ಲಿ ಸಮಾಜ ಹೆಚ್ಚಿನ ಪ್ರಯತ್ನಗಳು ಅಗತ್ಯ ಎಂದು ಅವರು ಹೇಳಿದರು. ಮಹಿಳೆಯರನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದರ ಮೂಲಕ ದೇಶವೊಂದರ ಪ್ರಗತಿಯನ್ನು ಅಳೆಯಬಹುದಾಗಿದೆ. ಮಹಿಳೆಯರ ಸ್ಥಿತಿಗತಿ ಸುಧಾರಿಸದ ಹೊರತು ದೇಶದ ಉದ್ಧಾರವಾಗದು ಎಂದು ಅವರು ಅಭಿಪ್ರಾಯಪಟ್ಟರು.
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಪೂಜ್ಯನೀಯ ಸ್ಥಾನವಿದೆ. ಮಹಿಳೆಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವುದರ ಮೂಲಕ ನಾಡಿನ ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಅವರು ಹೇಳಿದರು.
ಮತ್ತೊಬ್ಬ ಮುಖ್ಯ ಅತಿಥಿ ಥಿಯೋಸಫಿಕಲ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ ಬಿ. ಮಂಜುಳಾ ಮಾತನಾಡಿ ಪ್ರತಿ ತಾಯಿಯು ತನ್ನ ಮಕ್ಕಳಲ್ಲಿ ಹೆಣ್ಣು ಗಂಡು ಎಂಬ ಭೇದ ಭಾವವಿಲ್ಲದೆ ನೋಡಬೇಕು ಎಂದು ಹೇಳಿದರು. ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಗಂಡಿಗೆ ಸರಿಸಮಾನ ಎಂದು ತೋರಿಸಿಕೊಂಡಿದ್ದರೂ, ಹಲವೆಡೆಗಳಲ್ಲಿ ಇನ್ನೂ ನಡೆಯುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ, ಅತ್ಯಾಚಾರ ಇವುಗಳನ್ನು ತಡೆಯಬೇಕು. ವಿಶ್ವಾಸ, ಪ್ರೀತಿ, ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮ ಸಮಾಜದ ಕಣ್ಣುಗಳಾಗಬೇಕು. ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕು, ಎಂದು ಹೇಳಿದರು.
ಕಾಲೇಜಿನ ಮಹಿಳಾ ಸಬಲೀಕರಣ ಕೋಶ ’ಮನಸ್ವಿ’ಯ ಅಧ್ಯಕ್ಷೆ ಡಾ ಶರಣ ಬಸಮ್ಮ ಮಾತನಾಡಿ ಮಹಿಳಾ ಸಬಲೀಕರಣ ಎಂದರೆ, ಹಳೆಯ ಸಾಂಪ್ರದಾಯಿಕ ಚೌಕಟ್ಟು ಮೀರಿ ಹೊಸ ಅತ್ಯುತ್ತಮ ಅವಕಾಶಗಳಿಗೆ ತಮ್ಮನ್ನು ತೆರೆದುಕೊಳ್ಳುವುದಕ್ಕೆ ಅವರನ್ನು ಸಜ್ಜಾಗಿಸುವುದು ಎಂದರ್ಥ. ತನ್ನ ಜೀವನದಲ್ಲಿನ ಎಲ್ಲಾ ವಿಷಯಗಳ ಬಗ್ಗೆ ಒಬ್ಬ ಮಹಿಳೆ ತಾನೇ ತೀರ್ಮಾನ ಕೈಗೊಳ್ಳುವುದೇ ಸಬಲೀಕರಣ” ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಎಸ್.ಎಂ. ಶಶಿಧರ್ ಮಾತನಾಡಿ ಸ್ತ್ರೀ ತನ್ನ ಅಂತಃಶಕ್ತಿಯನ್ನು ಗುರುತಿಸಬೇಕು. ಬೆಳೆಸಿಕೊಳ್ಳಬೇಕು. ತೊಟ್ಟಿಲನ್ನು ತೂಗುವ ಕೈ ದೇಶ ಆಳಬಲ್ಲದು ಎನ್ನುವುದು ನಿರ್ವಿವಾದವಾಗಿ ಸಾಬೀತಾಗಿರುವ ಸತ್ಯ. ಸಶಕ್ತೀಕರಣ ಎಂದರೆ ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಇತ್ಯಾದಿ ಕ್ಷೇತ್ರಗಳಲ್ಲಿ ನಮ್ಮನ್ನೇ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು. ಸಾಧನೆ ಮಾಡಿ ತೋರಿಸುವುದು. ಇದು ಖಂಡಿತವಾಗಿಯೂ ಸಾಧ್ಯ. ಎಂದರು.
ಈ ಸಮಾರಂಭದ ವೇದಿಕೆಯಲ್ಲಿ ಇನ್ನಿತರ ಅತಿಥಿಗಳಾದ ಸೌಮ್ಯ ಏಕಾಮರೇಶ್, ಅನ್ನಪೂರ್ಣ ಸದಾಶಿವ ಮೂರ್ತಿ, ಕೆಎಂ ಪಾರ್ವತಿ ಅಧ್ಯಾಪಕರಾದ ಪಾರ್ವತಿ ಕಡ್ಲಿ, ಶಮಿತಾ, ಸಿಂಧೂ, ಗಿರಿಜಾ ಇವರು ಉಪಸ್ಥಿತರಿದ್ದರು